ಎಂ. ಜಿ. ಟಿ. ಸಂಸ್ಥೆಯಿಂದ 10 ಕುಟುಂಬಗಳಿಗೆ ಸಹಾಯ ಹಸ್ತ

May 17, 2021

 ಮಡಿಕೇರಿ ಮೇ 17 :    ಕೋವಿಡ್ ಲಾಕ್ ಡೌನ್ ನಿಂದಾಗಿ  ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ  ಮಡಿಕೇರಿಯ ಆಯ್ದ ಹತ್ತು ಕುಟುಂಬಗಳಿಗೆ ಇಂದು  ಎಂ. ಜಿ. ಟಿ ಸಂಸ್ಥೆಯ ಪದಾಧಿಕಾರಿಗಳಾದ ಆಶೀಶ್ ಮಡಿಕೇರಿ ಮತ್ತು ಖಲೀಲ್ ಕ್ರಿಯೇಟಿವ್ ಅವರ ನೇತೃತ್ವದಲ್ಲಿ ಒಂದು ತಿಂಗಳಿಗೆ ಬೇಕಾದ ಧವಸ ಧಾನ್ಯಗಳನ್ನು ವಿತರಿಸಲಾಯಿತು.     ಈ ಸಂದರ್ಭ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಅಶ್ರಫ್ ಗೋಣಿಕೊಪ್ಪ ಅವರು ಈಗಾಗಲೇ ಕೊಡಗಿನಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು. ನಮ್ಮ ಮನವಿಗೆ ಸ್ಪಂದಿಸಿ, ಸಂಪೂರ್ಣ ಬೆಂಬಲ ನೀಡುತ್ತಿರುವ ಕೇಂದ್ರ ಸಮಿತಿ (ಸೌದಿ ಅರೇಬಿಯಾ ) ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.      ಕಿಟ್ ವಿತರಣೆಯ ವೇಳೆ ಸಂಸ್ಥೆಯ ಜಲೀಲ್ ಅಮ್ಮತ್ತಿ, ನೌಶಾದ್ ಜನ್ನತ್ತ್, ಜಿನಾಸುದ್ದಿನ್ ಸುಂಟಿಕೊಪ್ಪ, ಹನೀಫ್ ಕೊಡ್ಲಿಪೇಟೆ, ಅತಿಕ್ ಕುಶಾಲನಗರ ಉಪಸ್ಥಿತರಿದ್ದರು.

error: Content is protected !!