ರುಚಿ ನೋಡಿ : ಕಾಡು ಮಾವಿನ ಹಣ್ಣಿನ ಸಾರು

June 1, 2021

ರುಚಿ ನೋಡಿ : ಕಾಡು ಮಾವಿನ ಹಣ್ಣಿನ ಸಾರು
*ಬೇಕಾಗುವ ಸಾಮಾಗ್ರಿಗಳು*
ಮಾವಿನಹಣ್ಣು, ಈರುಳ್ಳಿ, ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಎಣ್ಣೆ, ಕರಿಬೇವು, ಇಂಗು, ಹಸಿಮೆಣಸಿನಕಾಯಿ ಅಥವಾ ಒಣ ಮೆಣಸು, ಮೆಣಸಿನಪುಡಿ, ಅರಶಿನ ಪುಡಿ, ಉಪ್ಪು, ಧನಿಯಾ ಪುಡಿ, ಬೆಲ್ಲ.

  • *ರುಚಿ ರುಚಿಯಾದ ಮಾವಿನ ಹಣ್ಣಿನ ಸಾರು ಮಾಡುವ ವಿಧಾನ*
    ಮೊದಲು ಮಾವಿನಹಣ್ಣನ್ನು ತೊಳೆದು ಸಿಪ್ಪೆ ತೆಗೆದು ಇಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ, ಅದು ಕಾದ ನಂತರ ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಹೆಚ್ಚಿದ ಹಸಿಮೆಣಸಿನಕಾಯಿ, ಕರಿಬೇವು ಅಥವಾ ಒಣ ಮೆಣಸು, ಈರುಳ್ಳಿ ಹಾಕಬೇಕು. ಬಳಿಕ ಮಾವಿನಹಣ್ಣು, ಮೆಣಸಿನಪುಡಿ, ಅರಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಹುರಿದ ಧನಿಯಾ ಪುಡಿ, ರುಚಿಗೆ ತಕ್ಕಷ್ಟು ಬೆಲ್ಲ, ಇಂಗು ಹಾಗೂ ಸ್ವಲ್ಪ ನೀರು ಹಾಕಿ ಕುದಿಸಬೇಕು.
    ಸಿದ್ಧವಾದ ರುಚಿ ರುಚಿಯಾದ ಮಾವಿನ ಹಣ್ಣಿನ ಸಾರನ್ನು ಬಿಸಿ ಬಿಸಿ ಅನ್ನಕ್ಕೆ ಹಾಕಿ ಸೇವಿಸಿದರೆ ಸೂಪರ್. (( ಕೊಳ್ಳಿಮಾಡ ರಾಕಿ ))

error: Content is protected !!