ದಾಸವಾಳ ಹೂವಿನ ಜ್ಯೂಸ್ ಮಾಡುವ ವಿಧಾನ

June 6, 2021

ಮಡಿಕೇರಿ ಜೂ.6 : ದಾಸವಾಳ ಹೂವುಗಳು ಪೂಜೆ ಮತ್ತು ಅಲಂಕಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಆರೋಗ್ಯವರ್ಧಕವಾಗಿಯೂ ಕಾರ್ಯ ನಿರ್ವಹಿಸುತ್ತದೆ, ತಂಪಿನ ಗುಣ ಈ ಹೂವಿಗಿದೆ. ದಾಸವಾಳದ ಜ್ಯೂಸ್ ಕೂಡ ಆರೋಗ್ಯದ ರಕ್ಷಣೆಗೆ ಸಹಕಾರಿಯಾಗಿದೆ.
::: ಜ್ಯೂಸ್ ಮಾಡೋದು ಹೇಗೆ ? :::
ಒಂದು ಲೀಟರ್ ನೀರನ್ನು ಚೆನ್ನಾಗಿ ಕುದಿಸಿಕೊಟ್ಟುಕೊಳ್ಳಿ. ತೊಳೆದ 15 ಕೆಂಪು ದಾಸವಾಳದ ಹೂವುಗಳನ್ನು ಈ ನೀರಿಗೆ ಹಾಕಿ 10 ನಿಮಿಷ ಮುಚ್ಚಿಡಬೇಕು. ನಂತರ ಇದಕ್ಕೆ ಚಿಟಿಕಿ ಉಪ್ಪು, ರುಚಿಗೆ ತಕ್ಕಷ್ಟು ಸಕ್ಕರೆ ಮತ್ತು ನಿಂಬೆಹಣ್ಣಿನ ರಸವನ್ನು ಸೇರಿಸಿ ಕುಡಿದರೆ ದೇಹ ಕೂಲ್, ಕೂಲ್ ಆಗಿರುತ್ತೆ. (((ಬರಹ >>> ಕೊಳ್ಳಿಮಾಡ ರಾಕಿ)))

error: Content is protected !!