ಕೊಲೆ ಮತ್ತು ಹೋಮಕುಂಡ : ಪತ್ನಿ, ಪುತ್ರ ಹಾಗೂ ಜ್ಯೋತಿಷಿಗೆ ಜೀವಿತಾವಧಿ ಶಿಕ್ಷೆ

June 8, 2021

ಉಡುಪಿ ಜೂ.8 : 2016 ಜು.28 ರಂದು ಉಡುಪಿಯ ಇಂದ್ರಾಳಿಯಲ್ಲಿ ನಡೆದ ಉದ್ಯಮಿ ಭಾಸ್ಕರ್ ಶೆಟ್ಟಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಪತ್ನಿ, ಪುತ್ರ ಹಾಗೂಜ್ಯೋತಿಷಿಗೆ ಜೀವಿತಾವಧಿ ಜೈಲು ಶಿಕ್ಷೆ ವಿಧಿಸಿದೆ.

ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ, ಪುತ್ರ ನವನೀತ್ ಶೆಟ್ಟಿ ಹಾಗೂ ನಂದಳಿಕೆ ಮೂಲದ ಜ್ಯೋತಿಷಿ ನಿರಂಜನ್ ಭಟ್ ಅವರುಗಳನ್ನು ಅಪರಾಧಿಗಳೆಂದು ನ್ಯಾಯಾಲಯ ಪರಿಗಣಿಸಿದೆ.

ಕೊಲೆ ಮಾಡಿದ ನಂತರ ಭಾಸ್ಕರ್ ಶೆಟ್ಟಿ ಅವರ ಮೃತದೇಹವನ್ನು ಹೋಮದ ಬೆಂಕಿಯಲ್ಲಿ  ಸುಟ್ಟು ಹಾಕಲಾಗಿದೆ ಎಂದು ದೂರು ದಾಖಲಾಗಿ ತನಿಖೆ ನಡೆದಿತ್ತು.

error: Content is protected !!