ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಲೈಂಗಿಕ ಕಾರ್ಯಕರ್ತರಿಗೆ ಆದ್ಯತೆ ಮೇರೆಗೆ ಲಸಿಕೆ

June 8, 2021

ಮಡಿಕೇರಿ ಜೂ.8 : 18 ರಿಂದ 45 ವರ್ಷ ವಯೋಮಾನದವರಲ್ಲಿ ಆದ್ಯತೆ ಗುಂಪುಗಳನ್ನು ಗುರುತಿಸಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಪರಿಷ್ಕೃತ ಆದೇಶದಂತೆ ಕೋವಿಡ್-19 ಲಸಿಕಾಕರಣ ನಡೆಯಲಿದೆ.
ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್(ಎನ್‌ಪಿಸಿಐಎಲ್) ಕೈಗಾದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು, ನೇವಲ್ ಬೇಸ್ ಸಿವಿಲಿಯನ್‌ಗಳು, ಮಂಗಳಮುಖಿಯರು, ಲೈಂಗಿಕ ಅಲ್ಪಸಂಖ್ಯಾತರು ಮತ್ತು ಲೈಂಗಿಕ ಕಾರ್ಯಕರ್ತರು, ಜೈನ ಸಾಧು ಮತ್ತು ಸಾದ್ವಿಯರು, ಸವಿತಾ ಸಮಾಜ ಮತ್ತು ಬ್ಯೂಟಿ ಪಾರ್ಲರ್‌ನ ಸಿಬ್ಬಂದಿಗಳು, ಎಲೆಕ್ಟಿçಷಿಯನ್‌ಗಳು ಮತ್ತು ಪ್ಲಂಬರ್‌ಗಳು, ದಿನಪತ್ರಿಕೆಯ ಎಜೆನ್ಸಿಯವರು ಮತ್ತು ದಿನಪತ್ರಿಕೆ ವಿತರಣಾ ಸಿಬ್ಬಂದಿ, ಖಾಸಗಿ ವೈದ್ಯಕೀಯ ಪ್ರತಿನಿಧಿಗಳನ್ನು ಆದ್ಯತೆ ಗುಂಪಿಗೆ ಸೇರ್ಪಡಿಸಿ ಲಸಿಕಾಕರಣ ನಡೆಸಲು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರಾದ ಅರುಂಧತಿ ಅವರು ಆದೇಶಿಸಿದ್ದಾರೆ.

error: Content is protected !!