ಮಕ್ಕಳ ಗುಡಿ ಬೆಟ್ಟದ ಬಳಿ ತಲೆ ಬುರುಡೆ, ಮೂಳೆಗಳು, ಪ್ಯಾಂಟ್, ಜರ್ಕಿನ್ ಪತ್ತೆ !

June 9, 2021

ಸೋಮವಾರಪೇಟೆ ಜೂ.9 : ಸೋಮವಾರಪೇಟೆ ಸಮೀಪದ ಕಿರಗಂದೂರು ಗ್ರಾಮ‌ದ ಮಕ್ಕಳ ಗುಡಿ ಬೆಟ್ಟದ ಕೆಳಭಾಗದ ತೋಟದಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆಯ ಶಂಕೆ ಮೂಡಿದೆ. ಬೆಟ್ಟದ ಮೇಲಿನಿಂದ ಜಿಗಿದು ಅಪರಿಚಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕಳೆದ ನಾಲ್ಕೈದು ತಿಂಗಳ ಹಿಂದೆ ಘಟನೆ ನಡೆದಿರಬಹುದು ಎಂದು ಎನ್ನಲಾಗಿದ್ದು, ಸ್ಥಳದಲ್ಲಿ ತಲೆ ಬುರುಡೆ, ಮೂಳೆಗಳು, ಪ್ಯಾಂಟ್, ಜರ್ಕಿನ್ ದೊರೆತಿದೆ. ಬೆಟ್ಟದ ಕೆಳಭಾಗದಲ್ಲಿರುವ ರೋಷನ್ ಪೂವಯ್ಯ ಅವರ ತೋಟದಲ್ಲಿ ಘಟನೆ ಬೆಳಕಿಗೆ ಬಂದಿದೆ. ಇಂದು ತೋಟದ ಕಾರ್ಮಿಕರು ಕೆಲಸಕ್ಕೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ.  ಹೆಚ್ಚಿನ ಮಾಹಿತಿಗಾಗಿ ಮಡಿಕೇರಿಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪಳೆಯುಳಿಕೆಗಳನ್ನು ಕಳುಹಿಸಲಾಗಿದೆ. ಸೋಮವಾರಪೇಟೆ ಪೊಲೀಸ್ ಇನ್ಸ್ ಪೆಕ್ಟರ್ ಬಿ.ಜಿ. ಮಹೇಶ್, ಠಾಣಾಧಿಕಾರಿ ಶ್ರೀಧರ್, ಸಿಬ್ಬಂದಿಗಳಾದ ಶಶಿ, ಶಿವಕುಮಾರ್, ಪ್ರವೀಣ್, ರಮೇಶ್ ಅವರುಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

error: Content is protected !!