ಹಾನಗಲ್ಲು ಬಾಣೆ ಸೀಲ್ ಡೌನ್ ಏರಿಯಾದಲ್ಲಿ ಯುವಕರ ಪುಂಡಾಟ

June 9, 2021

ಸೋಮವಾರಪೇಟೆ ಜೂ.9 : ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ಲು ಗ್ರಾಮದಲ್ಲಿ ಕೋವಿಡ್ ಸೋಂಕಿತರಿದ್ದ ಮನೆಗಳಿಗೆ ತೆರಳಿ ಆರೋಗ್ಯ ವಿಚಾರಿಸಿದ ಗ್ರಾ.ಪಂ ಅಧ್ಯಕ್ಷರು, ಆಶಾ ಕಾರ್ಯಕರ್ತೆಯರು ಹಾಗೂ ಸೀಲ್ ಡೌನ್ ಬಡಾವಣೆಯ ನಿವಾಸಿಗಳನ್ನು ನಿಂದಿಸುವ ಮೂಲಕ ಕೆಲವು ಯುವಕರು ಪುಂಡಾಟ ಮೆರೆದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಕ್ಷುಲ್ಲಕ ಕಾರಣವನ್ನು ದೊಡ್ಡದು ಮಾಡಿ ಅವಾಚ್ಯ ಶಬ್ಧಗಳನ್ನು ಬಳಸಿ ಹಲ್ಲೆಗೆ ಯತ್ನಿಸಿರುವುದಲ್ಲದೆ, ಸೀಲ್ ಡೌನ್ ಟೇಪ್ ಕಿತ್ತೆಸೆದು ದರ್ಪ ಮೆರೆದಿದ್ದಾರೆ ಎಂದು ಆರೋಪಿಸಲಾಗಿದೆ. ಯುವಕರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

error: Content is protected !!