ಜೂ.10 ರಂದು ಸೂರ್ಯಗ್ರಹಣ

June 9, 2021

ಮಡಿಕೇರಿ ಜೂ.9 : ಚಂದ್ರಗ್ರಹಣ ಇತ್ತೀಚೆಗಷ್ಟೇ ಮುಗಿದ್ದಿದ್ದು, ಈಗ ಸೂರ್ಯ ಗ್ರಹಣದ ಕಾಲ ಸಮೀಪಿಸಿದೆ. ಇದೇ ಜೂ.10 ರಂದು ಗುರುವಾರ ನಡೆಯುವ ಸೂರ್ಯ ಗ್ರಹಣ ಭಾರತದಲ್ಲಿ ಕೂಡ ಭಾಗಶಃ ಗೋಚರಿಸಲಿದೆ. ಉತ್ತರ ಅಮೆರಿಕಾ, ಯುರೋಪ್ ಮತ್ತು ಏಷ್ಯಾದ ಉತ್ತರ ಭಾಗದಲ್ಲಿ ಭಾಗಶಃ ಕಂಡುಬರುತ್ತದೆ. ಅಲ್ಲದೇ ಉತ್ತರ ಕೆನಡಾ, ಗ್ರೀನ್‌ಲ್ಯಾಂಡ್ ಮತ್ತು ರಷ್ಯಾದಲ್ಲಿ ಪೂರ್ಣ ಸೂರ್ಯಗ್ರಹಣವನ್ನು ಕಾಣಬಹುದು. ಆದರೆ ಭಾರತದ ಕೆಲವೆಡೆ ಮಾತ್ರ ಈ ಗ್ರಹಣ ಕಾಣಿಸಿಕೊಳ್ಳಲಿದೆ. ಗುರುವಾರ ಮಧ್ಯಾಹ್ನ 1:42ಕ್ಕೆ ಆರಂಭಗೊಳ್ಳಲಿದ್ದು, ಸಂಜೆ 6:41ಕ್ಕೆ ಕೊನೆಗೊಳ್ಳುವುದು.

error: Content is protected !!