ತಬಲ ಕಲಾವಿದ ಸುರೇಶ್ ದಂಪತಿ ಆತ್ಮಹತ್ಯೆಗೆ ಶರಣು

June 9, 2021

ಮಂಗಳೂರು ಜೂ.9 : ದಕ್ಷಿಣ ಕನ್ನಡದ ಖ್ಯಾತ ತಬಲ ಕಲಾವಿದ ಸುರೇಶ್ ಹಾಗೂ ಅವರ ಪತ್ನಿ ವಾಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಂಗಳೂರಿನ ಪಿಂಟೋಸ್ ಬಡಾವಣೆಯ ತಮ್ಮ ನಿವಾಸದ ಬಾವಿಯಲ್ಲಿ ಸುರೇಶ್ ಅವರ ಮೃತದೇಹ ಹಾಗೂ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ವಾಣಿ ಅವರ ಮೃತದೇಹ ಪತ್ತೆಯಾಗಿದೆ.
ಆರ್ಥಿಕ ಸಂಕಷ್ಟವೇ ಆತ್ಮಹತ್ಯೆಗೆ ಕಾರಣವೆಂದು ಹೇಳಲಾಗಿದೆ. ಸುರೇಶ್ ತಬಲ ಕಲಾವಿದರಾಗಿದ್ದರೆ, ವಾಣಿ ಖಾಸಗಿ ಕಾಲೇಜ್ ನಲ್ಲಿ ಕ್ಲರ್ಕ್ ಆಗಿದ್ದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!