ಭತ್ತದ ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡಿದ ಕೇಂದ್ರ ಸರ್ಕಾರ

June 9, 2021

ನವದೆಹಲಿ ಜೂ.9 :ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿದೆ. ಪ್ರತಿ ಕ್ವಿಂಟಾಲ್ ಗೆ 72 ರೂ. ಏರಿಕೆ ಮಾಡಲಾಗಿದ್ದು, ಒಟ್ಟಾರೆ ಬೆಲೆ 1,940 ರೂ. ಏರಿಕೆಯಾದಂತ್ತಾಗಿದೆ. 

2021-22 ಬೆಳೆ ವರ್ಷಕ್ಕೆ(ಜುಲೈ-ಜೂನ್) ಭತ್ತದ ಬೆಲೆ 1,940 ರೂ.ಗೆ ಹೆಚ್ಚಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ. ಹಿಂದಿನ ವರ್ಷದ ಅವಧಿಯಲ್ಲಿ ಪ್ರತಿ ಕ್ವಿಂಟಾಲ್‌ ಭತ್ತದ ಬೆಲೆ 1,868 ರೂ. ಆಗಿತ್ತು. ಭವಿಷ್ಯದಲ್ಲಿಯೂ ಇದು ಮುಂದುವರಿಯುತ್ತದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.

error: Content is protected !!