ಕೊಡಗಿನ ಯುವಕ ಕೇರಳದಲ್ಲಿ ನೀರು ಪಾಲು

June 10, 2021

ಮಡಿಕೇರಿ ಜೂ.10 : ಜಿಲ್ಲೆಯ ಯುವಕ ಕೇರಳ ರಾಜ್ಯದ ಇರಿಟ್ಟಿಯಲ್ಲಿ ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಗುರುವಾರ ಸಂಭವಿಸಿದೆ.
ಚೇರಳ ಶ್ರೀಮಂಗಲ ಚೆಟ್ಟಳ್ಳಿಯ ಪ್ರದೀಶ್ (22) ಮೃತ ಯುವಕ. ಕೇರಳ ರಾಜ್ಯದ ಇರಿಟ್ಟಿ ಪಕ್ಕದ ಕೂಟುಪುಯ ಎಂಬಲ್ಲಿ ಕೇಬಲ್ ಕೆಲಸದಲ್ಲಿದ್ದ ಪ್ರದೀಶ್ ಹಾಗೂ ಮತ್ತಿಬ್ಬರು ಗುರುವಾರ ವಳವುಪಾರ ಎಂಬಲ್ಲಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದಾರೆ.
ಈ ಸಂದರ್ಭ ಪ್ರದೀಶ್ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಇರಿಟ್ಟಿ ಅಗ್ನಿಶಾಮಕ ದಳದವರು ನದಿಯಿಂದ ಮೃತದೇಹವನ್ನು ಹೊರತೆಗೆದರು. ಘಟನಾ ಸ್ಥಳಕ್ಕೆ ಇರಿಟ್ಟಿ ಸಬ್ ಇನ್ಸ್ಪೆಕ್ಟರ್ ಪುಷ್ಕರನ್ ಭೇಟಿ ನೀಡಿದರು. ಪರಿಯಾರಮ್ ಮೆಡಿಕಲ್ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

error: Content is protected !!