ಕೋವಿಡ್ ಲಸಿಕೆ : ಶೇ.95 ರಷ್ಟು ಸಾಧನೆ ಮಾಡಿದ ಕರ್ಣಂಗೇರಿ ಗ್ರಾಮ

June 10, 2021

ಮಡಿಕೇರಿ ಜೂ.10 : ಕೋವಿಡ್ ಲಸಿಕಾ ಅಭಿಯಾನ ಕೊಡಗು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಹೆಚ್ಚು ಪರಿಣಾಮಕಾರಿಯಾಗುತ್ತಿದೆ. ಕೆ.ನಿಡುಗಣೆ ಗ್ರಾ.ಪಂ ವ್ಯಾಪ್ತಿಯ ಕರ್ಣಂಗೇರಿ ಗ್ರಾಮದಲ್ಲಿ ಬಹುತೇಕ ಎಲ್ಲರೂ ಲಸಿಕೆ ಪಡೆಯುವ ಮೂಲಕ ಶೇ.95 ರಷ್ಟು ಸಾಧನೆಯಾಗಿದೆ.
ಗ್ರಾ.ಪಂ ಯ ಕರ್ಣಂಗೇರಿ ಸದಸ್ಯ ಜಾನ್ಸನ್ ಪಿಂಟೋ ಅವರ ನೇತೃತ್ವದಲ್ಲಿ ಗ್ರಾಮದ ಮೊಣಕಾಲ್ಮೂರು ಶಾಲಾ ಆವರಣದಲ್ಲಿ ಇಂದು 45 ವರ್ಷ ಮೇಲ್ಪಟ್ಟ 145 ಮಂದಿಗೆ ಲಸಿಕೆ ನೀಡಲಾಯಿತು. ಅಧ್ಯಕ್ಷ ಅಯ್ಯಪ್ಪ, ಸದಸ್ಯರುಗಳಾದ ಪ್ರಮೀಳ, ಅನಿತಾ, ಪುಷ್ಪಲತಾ, ಆರೋಗ್ಯಾಧಿಕಾರಿ ಡಾ.ಚೇತನ್, ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ದೇವಕಿ, ಉಷಾ, ಮಮತಾ, ಡಯಾನಾ, ಆಶಾ ಕಾರ್ಯಕರ್ತೆ ಅನಿತಾ ರೈ, ಪೌರಕಾರ್ಮಿಕ ರಂಗಯ್ಯ ಹಾಜರಿದ್ದರು.
ಗ್ರಾ.ಪಂ ವತಿಯಿಂದ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಿಕೊಡಲಾಗಿತ್ತು.

error: Content is protected !!