ಕೊಡಗು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಅನ್ನದಾನ

June 10, 2021

ಮಡಿಕೇರಿ ಜೂ.10 : ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ವತಿಯಿಂದ ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ರೋಗಿಗಳು, ಅವರ ಸಂಬAಧಿಕರು, ಕೋವಿಡ್ ವಾರಿಯರ್ಸ್, ಆಸ್ಪತ್ರೆಯ ಸಿಬ್ಬಂದಿಗಳು, ಆಂಬ್ಯುಲೆನ್ಸ್ ಚಾಲಕರು ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಊಟವನ್ನು ವಿತರಿಸಲಾಯಿತು.
ಮುಂದಿನ ದಿನಗಳಲ್ಲಿಯೂ ಅಲ್ಪಸಂಖ್ಯಾತರ ಘಟಕ ಸಂಕಷ್ಟದಲ್ಲಿರುವವರ ನೋವಿಗೆ ಸ್ಪಂದಿಸುವುದಲ್ಲದೆ ಸಾಮಾಜಿಕ ಕಳಕಳಿಯೊಂದಿಗೆ ಕಾರ್ಯ ನಿರ್ವಹಿಸುವುದಾಗಿ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾಅಚ್ಚಯ್ಯ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪ, ಕೆಪಿಸಿಸಿ ಪ್ರಮುಖ ಟಿ.ಪಿ.ರಮೇಶ್, ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಮಹಮ್ಮದ್ ಆರಿಫ್ ಎಡಪಾಲ, ಪ್ರಮುಖರಾದ ಬಾಪು ಅಮ್ಮತ್ತಿ, ಸಂದೀಪ್ ಮುಕ್ಕಾಟಿರ, ಇಸ್ಮಾಯಿಲ್, ಕಲೀಲ್ ಭಾಷಾ, ರಮಾನಾಥ್, ಹನೀಫ್ ಸಂಪಾಜೆ, ತೆರೇಸಾ ವಿಕ್ಟರ್, ಭಾವ, ಸೂರಜ್ ಹೊಸೂರ್, ಚಂದ್ರಶೇಖರ್ ಆರ್.ಪಿ, ಶಾಫಿ ಎಡಪಾಲ, ಮಹಮ್ಮದ್ ಸಲೀಂ, ಸುನಿಲ್, ಮಹಮ್ಮದ್ ಎಡಪಾಲ, ಸೂಫಿಹಾಜಿ ಎಡಪಾಲ, ಹಕೀಮ್ ಸುಂಟಿಕೊಪ್ಪ, ಸಿದ್ದಿಕ್ ನೆಲ್ಲಿಹುದಿಕೇರಿ, ಸುಬೈರ್ ಕಡಂಗ, ಸುಮೇಶ್, ರಫಿಕ್ ಖಾನ್, ಆರಿಫ್ ನೆಲ್ಲಿಹುದಿಕೇರಿ, ಹಮೀದ್ ಆರಿಫ್ ಸುಂಟಿಕೊಪ್ಪ ಮತ್ತಿತರರು ಹಾಜರಿದ್ದರು.

error: Content is protected !!