ಕೇಂದ್ರದ ವಕೀಲರಾಗಿ ಕೊಡಗಿನ ಮೂವರು ಆಯ್ಕೆ

June 16, 2021

ಮಡಿಕೇರಿ ಜೂ.16 : ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಕೇಂದ್ರ ಸರಕಾರದ ವಕೀಲರಾಗಿ ಆಯ್ಕೆಯಾಗಿರುವ ತಂಡದಲ್ಲಿ ಕೊಡಗಿನ ಮೂವರು ಸ್ಥಾನ ಪಡೆದುಕೊಂಡಿದ್ದಾರೆ.
ಮಡಿಕೇರಿ ತಾಲೂಕು ಕಾರುಗುಂದ ಮೂಲದ ಚರಣ್ ಕುಂಜಿಲನ, ಮುತ್ತಾರ್ಮುಡಿ ಮೂಲದ ಪಾರೆಮಜಲು ಉಮೇಶ್ ಹಾಗೂ ಹೊದ್ದೂರಿನ ಚೆಟ್ಟಿಮಾಡ ರವೀಂದ್ರ ಅವರನ್ನು ಆಯ್ಕೆ ಮಾಡಿ ಕೇಂದ್ರ ಕಾನೂನು ಸಚಿವಾಲಯ ಆದೇಶ ಹೊರಡಿಸಿದೆ.
ಬೆಂಗಳೂರಿನ ಕರ್ನಾಟಕ ಉಚ್ಚ ನ್ಯಾಯಾಲಯ, ಧಾರವಾಡ ಮತ್ತು ಗುಲ್ಬರ್ಗಾ ಹೈಕೋರ್ಟ್ ಪೀಠ, ಸಿಎಟಿ ಬೆಂಗಳೂರು ಪೀಠದಲ್ಲಿ ರೈಲ್ವೆ ಮತ್ತು ತೆರಿಗೆ ಇಲಾಖೆ ಹೊರತುಪಡಿಸಿ ಕೇಂದ್ರ ಸರಕಾರಕ್ಕೆ ಸಂಬಂಧಿಸಿದ ವ್ಯಾಜ್ಯಗಳನ್ನು ಇವರುಗಳು ಪ್ರತಿನಿಧಿಸಲಿದ್ದಾರೆ.

error: Content is protected !!