ಕಾಡುಕುರಿ ಚರ್ಮ ಮಾರಾಟ ಯತ್ನ : ಕಗ್ಗೋಡ್ಲುವಿನಲ್ಲಿ ಆರೋಪಿ ಸೆರೆ

June 16, 2021

ಮಡಿಕೇರಿ ಜೂ.16 : (NEWS DESK) ಕಾಡುಕುರಿಯ 2 ಚರ್ಮಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸ್ ಅರಣ್ಯ ಸಂಚಾರಿ ದಳ ಯಶಸ್ವಿಯಾಗಿದೆ.
ವಿರಾಜಪೇಟೆಯ ಕದನೂರು ನಿವಾಸಿ ಕೆ.ಎಂ.ಜೋಯಪ್ಪ (37) ಬಂಧಿತ ಆರೋಪಿಯಾಗಿದ್ದು, ಕುರಿಯ 2 ಒಣಗಿದ ಚರ್ಮಗಳನ್ನು ವಶ ಪಡಿಸಿಕೊಳ್ಳಲಾಗಿದೆ. ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಮಡಿಕೇರಿಯ ಕಗ್ಗೋಡ್ಲು ಜಂಕ್ಷನ್ ಬಳಿ ನಡೆದ ಕಾರ್ಯಾಚರಣೆ ಅರಣ್ಯ ಸಂಚಾರಿ ದಳದ ಪೊಲೀಸ್ ಅಧೀಕ್ಷಕ ಸುರೇಶ್ ಬಾಬು ಅವರ ಮಾರ್ಗದರ್ಶನದಲ್ಲಿ ನಡೆಯಿತು.
ಮಡಿಕೇರಿ ಅರಣ್ಯ ಸಂಚಾರಿ ದಳದ ಪಿ.ಎಸ್.ಐ ಸಿ.ಯು.ಸವಿ, ಹೆಡ್ ಕಾನ್ಸ್ಟೇಬಲ್‌ಗಳಾದ ಶೇಖರ್, ರಾಜೇಶ್, ರಾಘವೇಂದ್ರ, ಯೋಗೇಶ್ ಹಾಗೂ ಚಾಲಕ ಮೋಹನ್ ಪಾಲ್ಗೊಂಡಿದ್ದರು.

error: Content is protected !!