SSF ಕೊಡಗು ಜಿಲ್ಲಾ ಸಮಿತಿಯಿಂದ ಕರಿಯರ್ ಗೈಡೆನ್ಸ್ : ಭಾನುವಾರ ZOOM ಮೂಲಕ ಕಾರ್ಯಾಗಾರ

June 19, 2021

ಮಡಿಕೇರಿ ಜೂ.19 : ವಿದ್ಯಾರ್ಥಿಗಳ ಮುಂದಿನ ಜೀವನದ ದಾರಿಗಳ ಕುರಿತು ಮಾಹಿತಿಯನ್ನು ಒದಗಿಸುವ ಸಲುವಾಗಿ ಎಸ್ಎಸ್ಎಫ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ನಾಳೆ (20-06-2021) ಬೆಳಗ್ಗೆ 10 ಗಂಟೆಗೆ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮವನ್ನು ಆನ್ಲೈನ್ (ZOOM) ಮೂಲಕ ನಡೆಸಲಾಗುತ್ತಿದೆ.
        ಎಸ್ಎಸ್ಎಫ್ ಜಿಲ್ಲಾಧ್ಯಕ್ಷರಾದ ಶಾಫಿ ಸಅದಿ ಸೋಮವಾರಪೇಟೆ ರವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಕುವೆಂಪು ಯೂನಿವರ್ಸಿಟಿಯ ಅಸಿಸ್ಟೆಂಟ್ ಪ್ರೊಫೆಸರ್ ಆದ ಶಾಕಿರ್‌ರವರು ತರಗತಿ ನಡೆಸಲಿದ್ದಾರೆ.
     ಎಸ್ ಎಸ್ ಎಫ್ ಕರ್ನಾಟಕ ರಾಜ್ಯ ಸಮಿತಿಯ ಕ್ಯಾಂಪಸ್ ಕಾರ್ಯದರ್ಶಿ ಶರೀಫ್ ಹೊಸತೋಟ ಉದ್ಘಾಟನೆ ನಿರ್ವಹಿಸುವ ಈ ಕಾರ್ಯಕ್ರಮದಲ್ಲಿ ಪ್ರಮುಖ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
 ಎಸ್ಎಸ್ಎಲ್ಸಿ, ಪಿಯುಸಿ, ಡಿಗ್ರಿ ವಿದ್ಯಾರ್ಥಿಗಳಿಗೆ ನಡೆಸಲ್ಪಡುವ ಈ ಕಾರ್ಯಕ್ರಮದಲ್ಲಿ ಎಲ್ಲಾ ಧರ್ಮದ ವಿದ್ಯಾರ್ಥಿಗಳು ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಬಹುದೆಂದು ಎಸ್ಎಸ್ಎಫ್ ಕೊಡಗು ಜಿಲ್ಲಾ ಸಮಿತಿಯ ವಿಸ್ಡಮ್ ಕಾರ್ಯದರ್ಶಿ ಝಕರಿಯ ಕೊಂಡಂಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಸೇರಬಯಸುವವರು ಕೆಳಗೆ ನೀಡಿರುವ ವಾಟ್ಸಪ್ ಸಂಖ್ಯೆಯಲ್ಲಿ ಮೆಸೇಜ್ ಮಾಡಿ ZOOMನ ಲಿಂಕನ್ನು ಪಡೆದುಕೊಳ್ಳಬಹುದು.
     ಝಕರಿಯ              +91 99023 07541     

ಮುಜೀಬ್             +91 94809 06066

error: Content is protected !!