ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಕ್ಸಿಜನ್ ಕಾನ್ಸಂಟ್ರೇಟರ್ ಹಸ್ತಾಂತರ

June 19, 2021

ಸುಂಟಿಕೊಪ್ಪ ಜೂ.19 : ಕುಶಾಲನಗರ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ಆಕ್ಸಿಜನ್ ಕಾನ್ಸಂಟ್ರೇಟರ್ ಯಂತ್ರವನ್ನು ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಲಾಯಿತು. ರೆಡ್‌ಕಾಸ್ ಸಂಸ್ಥೆಯ ಅಧ್ಯಕ್ಷ ಎಸ್.ಕೆ.ಸತೀಶ್ ಅವರು ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಕೋವಿಡ್ 19 ಸೋಂಕಿತರಿಗೆ ಉಸಿರಾಟದ ಸಮಸ್ಯೆ ಎದುರಾಗುವ ಸಂದರ್ಭ ಅವರ ಚಿಕಿತ್ಸೆಗಾಗಿ ಈ ಯಂತ್ರವನ್ನು ಬಳಸಿಕೊಳ್ಳಬುದಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಬಡ ರೋಗಿಗಳಿಗೆ ಸದಬಳಕೆಯಾಗಲಿದೆ ಎಂದು ಕುಶಾಲನಗರ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ್ ಹೇಳಿದರು.
ಈ ಸಂದರ್ಭ ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳಾದ ಗೌತಮ್, ಚಂದು, ವೆಂಕಟೇಶ್, ಪ್ರೇಮ್ ಚಂದ್ರು, ವೈದ್ಯಾಧಿಕಾರಿಗಳಾದ ಡಾ.ಜೀವನ್, ಡಾ.ನೇತ್ರಾವತಿ, ಡಾ.ನಿಸರ್ಗ, ಜಿ.ಪಂ ಮಾಜಿ ಸದಸ್ಯ ಪಿ.ಎಂ.ಲತೀಫ್, ಗ್ರಾ.ಪಂ.ಸದಸ್ಯ ಪಿ.ಆರ್.ಸುನಿಲ್ ಕುಮಾರ್, ಆಸ್ಪತ್ರೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಇದ್ದರು.

error: Content is protected !!