ವಿರಾಜಪೇಟೆ ತಾಲ್ಲೂಕಿನ ಕಾಫಿ ತೋಟ, ಮನೆಗಳಲ್ಲಿದ್ದ ಬಾಲ ಕಾರ್ಮಿಕರ ರಕ್ಷಣೆ : ಮಾಲೀಕರ ವಿರುದ್ಧ ಕ್ರಮ

June 19, 2021

ಮಡಿಕೇರಿ ಜೂ.19 : ಮಕ್ಕಳ ಸಹಾಯವಾಣಿಗೆ ಬಂದ ದೂರನ್ನು ಆಧರಿಸಿ ಇಂದು  ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ, ಹೊಸೂರು, ಕಾರೆಕಾಡು ಗ್ರಾಮಗಳ ಕಾಫಿ ತೋಟ ಹಾಗೂ ಸ್ಥಳೀಯ ಮನೆಗಳಿಗೆ ತೆರಳಿ ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಧೆಯ  ಕಾರ್ಮಿಕ ಕಾಯ್ದೆಯಡಿ ತಪಾಸಣೆಯನ್ನು ನಡೆಸಲಾಯಿತು.  ಕಾರ್ಯಾಚರಣೆ ಸಂದರ್ಭ ಮನೆಯ ಹಾಗೂ ತೋಟದ ಕೆಲಸಗಳಲ್ಲಿ ನಿರತರಾಗಿದ್ದ ಇಬ್ಬರು ಕಿಶೋರಾವಸ್ಧೆಯ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದ್ದು, ಮಕ್ಕಳ ಪೋಷಣೆ ಹಾಗೂ ರಕ್ಷಣೆಯ ಉದ್ದೇಶದಿಂದ ಮಡಿಕೇರಿ ಸರ್ಕಾರಿ ಬಾಲಮಂದಿರದಲ್ಲಿ ಮಕ್ಕಳನ್ನು ಪುನರ್ವಸತಿಗೊಳಿಸಲಾಗಿದೆ.  ತಪ್ಪಿತಸ್ಥ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

  ಜಿಲ್ಲಾ ಮಕ್ಕಳ ವಿಶೇಷ ಪೊಲೀಸ್  ಘಟಕದ ಎಂ.ಬಿ.ಸುಮತಿ ಹಾಗೂ  ಯು.ಎ.ಮಹೇಶ್,  ಆರ್. ಶೀರಾಝ್ ಅಹ್ಮದ್ ಯೋಜನಾ ನಿರ್ದೇಶಕರು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ,  ಜಯಣ್ಣ ಹಿರಿಯ ಕಾರ್ಮಿಕ ನಿರೀಕ್ಷಕರು ವಿರಾಜಪೇಟೆ ವೃತ್ತ,  ಹೆಚ್.ಕೆ ಪೂನ್ನು, ಉಪ ತಹಶಿಲ್ದಾರರು ಪೋನ್ನಂಪೇಟೆ ತಾಲ್ಲೂಕು,  ಪ್ರವೀಣ್ ಕುಮಾರ್,  ಜಿಲ್ಲಾ ಚೈಲ್ಡ್ ಲೈನ್ ಮಕ್ಕಳ ಸಹಾಯವಾಣಿ ತಂಡದ ಸದಸ್ಯರು,   ಕಿರಣ್  ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೆ.ಎಂ. ಭಾನುಪ್ರಿಯ, ಮೋನಿಕ ಡಿ.ಜಿ ಮತ್ತು ಬಣಗಾರ್ ಗ್ರಾಮ ಲೆಕ್ಕಿಗರು  ಕಾರ್ಯಾಚರಣೆಯಲ್ಲಿದ್ದರು.

error: Content is protected !!