ನಿಧನ ಸುದ್ದಿ : 20/06/2021

June 20, 2021

ಪೊನ್ನಂಪೇಟೆ, ಜೂ.20 : ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ. ಎಂ.ಎ.) ಅಧ್ಯಕ್ಷರಾದ ಮತ್ತು ವಿರಾಜಪೇಟೆಯ ಡಿ ಎಚ್ ಎಸ್ ಗ್ರೂಪ್ ಆಫ್ ಕಂಪನಿ ಮಾಲೀಕರಾದ ದುದ್ದಿಯಂಡ  ಹೆಚ್. ಸೂಫಿ ಹಾಜಿ ಅವರ ತಾಯಿ ಡಿ.ಎಚ್. ಆಮಿನಾ ಅವರು ನಿನ್ನೆ ರಾತ್ರಿ ನಿಧನರಾದರು.
ವಿರಾಜಪೇಟೆ ಸಮೀಪದ ನಲ್ವತ್ತೋಕ್ಲು ಗ್ರಾಮದ ದಿವಂಗತ ದುದ್ದಿಯಂಡ ಹುಸೈನಾರ್ ಹಾಜಿ (ಪಾಳಿಮಾಡು) ಅವರ ಪತ್ನಿಯಾಗಿರುವ ಆಮಿನಾ ಅವರಿಗೆ 72 ವರ್ಷ ಪ್ರಾಯವಾಗಿತ್ತು. ಮೃತರು ಮೂವರು ಗಂಡು ಮತ್ತು ನಾಲ್ವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ದುದ್ದಿಯಂಡ ಆಮಿನಾ ಅವರ ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆ ನಲ್ವತ್ತೋಕ್ಲು ಜುಮಾ ಮಸೀದಿಯ ಖಬರ್ಸ್ಥಾನದಲ್ಲಿ ನಡೆಯಿತು.
ಮೃತ ಆಮಿನಾ ಅವರ ನಿಧನಕ್ಕೆ ಕೆ. ಎಂ. ಎ. ಪದಾಧಿಕಾರಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.

error: Content is protected !!