ಆನೆಕಾಡಿನಲ್ಲಿ “ಜಾನಪದ ಮೈತ್ರಿ” : ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ : ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ

June 20, 2021

ಮಡಿಕೇರಿ ಜೂ.20 : ಪ್ರಕೃತಿ ಮತ್ತು ಜಾನಪದ ನಡುವೆ ಅವಿನಾಭಾವ ಸಂಬಂಧವಿದ್ದು, ಪ್ರಕೃತಿ ಜಾನಪದದ ಮೂಲವಾಗಿದೆ. ಪರಿಸರದ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಎಂದು ಕರ್ನಾಟಕ ಜಾನಪದ ಪರಿಷತ್ತು ಕೊಡಗು ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ ಕರೆ ನೀಡಿದ್ದಾರೆ.
ಕುಶಾಲನಗರ ತಾಲ್ಲೂಕು ಜಾನಪದ ಪರಿಷತ್ತು ಆಶ್ರಯದಲ್ಲಿ ಅರಣ್ಯ ಇಲಾಖೆ, ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿ ಸಹಯೋಗದೊಂದಿಗೆ ಆನೆಕಾಡು ಮೀಸಲು ಅರಣ್ಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ “ಜಾನಪದ ಮೈತ್ರಿ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಕೃತಿ ಆರಾಧನೆ ಮೂಲಕ ಉತ್ತಮ ಪರಿಸರ ನಿರ್ಮಾಣ ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಲ್ಯಾಂಪ್ಸ್ ಅಧ್ಯಕ್ಷ ಆರ್.ಕೆ ಚಂದ್ರು ಮಾತನಾಡಿ, ಅರಣ್ಯ ಸಂರಕ್ಷಣೆ ಜತೆಗೆ ಪ್ರತಿಯೊಬ್ಬರೂ ಗಿಡ ಮರ ಬೆಳೆಸುವ ಪ್ರವೃತ್ತಿ ಹೊಂದಬೇಕು ಎಂದರು.
ಆನೆಕಾಡು ಮೀಸಲು ಅರಣ್ಯದಲ್ಲಿ ಗಿಡಗಳನ್ನು ನೆಡುವ ಮೂಲಕ ಕಾಡು ಗಿಡಗಳ ಬೀಜ ಬಿತ್ತುವ ಕಾರ್ಯ ಚಾಲನೆ ನೀಡಿದ ಆನೆಕಾಡು ಶಾಖೆಯ ಉಪವಲಯ ಅರಣ್ಯಾಧಿಕಾರಿ ಕೆ.ಎನ್ ದೇವಯ್ಯ ಸಂಘ ಸಂಸ್ಥೆಗಳು ಅರಣ್ಯ ಬೆಳೆಸುವ ಕೆಲಸದಲ್ಲಿ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಜಾನಪದ ಪರಿಷತ್ತಿನ ಪದಾಧಿಕಾರಿಗಳು, ಸದಸ್ಯರು ಕಾಡಿನಲ್ಲಿ ಬಿದಿರು, ಹೊಂಗೆ, ಸೀಗೆ, ಹಲಸು ಸೇರಿದಂತೆ ಹಲವು ಜಾತಿಯ ಮರಗಳ ಬೀಜ ಬಿತ್ತನೆ ಮಾಡಿದರು.
ಅರಣ್ಯ ಅಧಿಕಾರಿ, ಸಿಬ್ಬಂದಿಗಳು ಕಾಡಿನ ಮರಗಳ ಬಗ್ಗೆ ಮಾಹಿತಿ ಒದಗಿಸಿದರು.
ಪರಿಷತ್ತಿನ ಕುಶಾಲನಗರ ತಾಲ್ಲೂಕು ಅಧ್ಯಕ್ಷ ಎಂ.ಎನ್.ಚಂದ್ರ ಮೋಹನ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಎಸ್.ಇ ಮುನೀರ್ ಆಹಮದ್, ಖಜಾಂಚಿ ಸಂಪತ್ ಕುಮಾರ್ ಸರಳಾಯ, ಜೋಯಪ್ಪ, ಕೃಪಾದೇವರಾಜ್, ವೀಣಾಕ್ಷಿ ರವಿಕುಮಾರ್, ಕೆ.ವಿ ಕವಿತ,ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್,, ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಮಂಜೇ ಗೌಡ, ಆನಂದ್, ಸಂಜು, ಮಂಜು, ದಿನೇಶ್, ಪರಿಷತ್ತಿನ ತಾಲ್ಲೂಕು ಪ್ರಮುಖರಾದ ಸುನೀತ ಸಾಗರ್, ವಿನೋದ್, ಪಿ.ವಿ. ಅಕ್ಷಯ್, ತೋರೆರ ಉದಯ್ ಕುಮಾರ್, ಕೊಡಗನ ಹರ್ಷ, ವಿನಯ್, ವನಿತಾ ಚಂದ್ರಮೋಹನ್, ಮತ್ತಿತರರು ಇದ್ದರು.

error: Content is protected !!