ಸುಂಟಿಕೊಪ್ಪ : ಕೂಲಿ ಕಾರ್ಮಿಕನ ಚಿಕಿತ್ಸೆಗೆ ನೆರವು ನೀಡಲು ಮನವಿ

June 20, 2021

ಸುಂಟಿಕೊಪ್ಪ ಜೂ.20 : ಶ್ವಾಸಕೋಶದ ಕಾಯಿಲೆಯಿಂದ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊಡಗರಹಳ್ಳಿ ಅಂದಗೋವೆ ಗ್ರಾಮದ ನಿವಾಸಿ ಕೂಲಿ ಕಾರ್ಮಿಕ ಸುರೇಶ್ ಅವರ ಹೆಚ್ಚಿನ ಚಿಕಿತ್ಸೆಗೆ ಹಣದ ಅವಶ್ಯಕತೆ ಇದ್ದು ಕೊಡಗಿನ ಸಹೃದಯಿ ದಾನಿಗಳು ನೆರವು ನೀಡಿ ಸಹಕರಿಸಬೇಕೆಂದು ಸುರೇಶ್ ಅವರ ಪತ್ನಿ ರೇಖಾ ಮನವಿಕೊಂಡಿದ್ದಾರೆ.
ಮಡಿಕೇರಿ ವೈದ್ಯರ ಸಲಹೆಯಂತೆ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಕಳೆದ 15 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಈಗಾಗಲೇ ಶ್ವಾಸಕೋಶದ ಶಸ್ತç ಚಿಕಿತ್ಸೆ ಮಾಡಲಾಗಿದೆ. ಸುರೇಶ್ ಅವರ ಕುಟುಂಬದವರು ತಮ್ಮ ತೋಟದ ಮಾಲೀಕರ ಸಹಾಯದಿಂದ 2 ಲಕ್ಷ ರೂ. ಖರ್ಚು ಮಾಡಿದ್ದು, ಮುಂದಿನ ಚಿಕಿತ್ಸೆಗೆ ತುರ್ತಾಗಿ ಹಣದ ಅಗತ್ಯವಿದೆ.
ಸುರೇಶ್ ಐಸಿಯೂ ವಿಭಾಗದಲ್ಲಿ ಪ್ರಜ್ಞಾಶೂನ್ಯರಾಗಿ ಚಿಕಿತ್ಸೆ ಪಡೆಯುತ್ತಿದ್ದು, ಪತಿಯ ಜೀವ ಉಳಿಸಿಕೊಡುವಂತೆ ರೇಖಾ ಮನವಿ ಮಾಡಿದ್ದಾರೆ.
ಧನ ಸಹಾಯ ಮಾಡುವವರು ಕೆನರಾ ಬ್ಯಾಂಕ್ ಖಾತೆ ಸಂಖ್ಯೆ 0688119001462, ಐಎಫ್‌ಸಿ ಕೋಡ್ ಸಿಎನ್‌ಆರ್‌ಬಿ0000688 ಗೆ ಸಂದಾಯ ಮಾಡಬಹುದೆಂದು ಕೋರಿದ್ದಾರೆ. ಮೊ.ಸಂ : 94486 48404

error: Content is protected !!