ಆಮ್ಲಜನಕ ಸಾಂದ್ರಕದ ಅಗತ್ಯವಿರುವವರು ವಿವೇಕಾನಂದ ಯೂತ್ ಮೂವ್‌ಮೆಂಟ್ ನ್ನು ಸಂಪರ್ಕಿಸಬಹುದು

June 20, 2021

ಮಡಿಕೇರಿ ಜೂ.20 : ಕೋವಿಡ್ ಸೋಂಕಿಗೆ ಒಳಗಾಗಿ ಉಸಿರಾಟದ ತೊಂದರೆ ಅನುಭವಿಸುತ್ತಿರುವವರಿಗೆ ಆಮ್ಲಜನಕದ ಅವಶ್ಯಕತೆ ಇದ್ದರೆ ಅಥವಾ ಗೃಹ ಆರೈಕೆಯಲ್ಲಿರುವ ವ್ಯಕ್ತಿಗಳಿಗೆ ಆಮ್ಲಜನಕ ಸಾಂದ್ರಕಗಳನ್ನು ಒದಗಿಸುವ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ ಎಂದು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯ ಕೊಡಗು ಘಟಕ ತಿಳಿಸಿದೆ.
ವೈದ್ಯಕೀಯ ದಾಖಲಾತಿಗಳಿದ್ದರೆ ಮಾತ್ರ ಈ ಸೌಲಭ್ಯವನ್ನು ಪಡೆಯಬಹುದು.
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯು ಸರ್ಕಾರ ಮತ್ತು ಸಮುದಾಯದ ಸಹಕಾರದಿಂದ ಕೊಡಗು ಜಿಲ್ಲೆಯಾದ್ಯಂತ ಆರೋಗ್ಯ, ಶಿಕ್ಷಣ, ತರಬೇತಿ ಹಾಗೂ ಸಾಮಾಜಿಕ ಆರ್ಥಿಕ ಸಬಲೀಕರಣ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ.
ಕೋವಿಡ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಲಸಿಕೆಯನ್ನು ನೀಡುವ ಸಂಬAಧ ಆರ್.ಡಿ.ಪಿ.ಆರ್. ಇಲಾಖೆಯು ಸದರಿ ಸಂಸ್ಥೆಯನ್ನು ಜಿಲ್ಲಾ ನೋಡಲ್ ಎನ್.ಜಿ.ಓ. ಆಗಿ ಆಯ್ಕೆ ಮಾಡಲಾಗಿದೆ.
ಜಾಗೃತಿ ಕಾರ್ಯಕ್ರಮಗಳಲ್ಲಿ ಆರ್.ಡಿ.ಪಿ.ಆರ್. ಮತ್ತು ಆರೋಗ್ಯ ಇಲಾಖೆಯಿಂದ ಪಡೆದಿರುವ ಆಡಿಯೋ, ವಿಡಿಯೋ ಕ್ಲಿಪ್, ಕರಪತ್ರಗಳನ್ನು ಬಳಸಲಾಗುತ್ತದೆ. ಆರ್ಥಿಕವಾಗಿ ತೊಂದರೆಯಿರುವ ವಿಶೇಷ ಚೇತನರಿಗೆ ಫುಡ್ ಕಿಟ್ ಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಸಂಸ್ಥೆಯ ಪ್ರಮುಖರು ತಿಳಿಸಿದ್ದಾರೆ.
ಆಮ್ಲಜನಕ ಸಾಂದ್ರಕಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಡಾ|| ಚಂದ್ರಶೇಖರ್ ಆರ್, ದಕ್ಷಿಣ ಕೊಡಗು, ಮೊಬೈಲ್ ಸಂಖ್ಯೆ: 9448047859
ಅಂಕಾಚಾರಿ, ಉತ್ತರ ಕೊಡಗು, ಮೊಬೈಲ್ ಸಂಖ್ಯೆ: 9964103322 ನ್ನು ಸಂಪರ್ಕಿಸಬಹುದಾಗಿದೆ.

error: Content is protected !!