ಕೊಡಗು ರಕ್ಷಣಾ ವೇದಿಕೆಯ ಕೊಡ್ಲಿಪೇಟೆ ಹೋಬಳಿ ಘಟಕ ರಚನೆ

June 20, 2021

ಮಡಿಕೇರಿ ಜೂ.20 : ಕೊಡಗು ರಕ್ಷಣಾ ವೇದಿಕೆಯ ಕೊಡ್ಲಿಪೇಟೆ ಹೋಬಳಿ ಘಟಕವನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಶೋಭಿತ್ ಗೌಡ ಆಯ್ಕೆಯಾಗಿದ್ದಾರೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಪವನ್ ಪೆಮ್ಮಯ್ಯ ತಿಳಿಸಿದ್ದಾರೆ.
ಗೌರವ ಅಧ್ಯಕ್ಷರುಗಳಾಗಿ ಅಬ್ದುಲ್ ಲತೀಫ್, ಅಬ್ದುಲ್ ಸಮದ್, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಎನ್.ವಸಂತ್, ಖಜಾಂಚಿಯಾಗಿ ಮೊಹಮದ್ ತುಫೈಲ್, ಉಪಾಧ್ಯಕ್ಷರುಗಳಾಗಿ ಲತೇಶ್ ಶೆಟ್ಟಿ, ವಾಸಿಮ್, ಕೊಡ್ಲಿಪೇಟೆ ನಗರಾಧ್ಯಕ್ಷರಾಗಿ ಅಬ್ದುಲ್ ಅಜೀಜ್, ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಸಿದ್ದೇಶ್ ಕೊಡ್ಲಿಪೇಟೆ, ಹೋಬಳಿ ಸಂಚಾಲಕರಾಗಿ ಯತೀಶ್, ಸಹ ಸಂಚಾಲಕರು-ಪ್ರಸನ್ನ ಡಿ.ಕೆ, ಸಹ ಕಾರ್ಯದರ್ಶಿಗಳಾಗಿ ಅವಿನಾಶ್, ನಿರ್ದೇಶಕರುಗಳಾಗಿ ಮೊಹಮದ್ ರೈಸ್ ಅಕ್ತರ್, ಇಮ್ರಾನ್, ವಸೀಲ್, ಶ್ರೀಧರ್, ಲೋಕೇಶ್ ನವಗ್ರಾಮ, ರಮೇಶ ನವಗ್ರಾಮ, ಸಿದ್ದಿಕ್ ನೇಮಕಗೊಂಡಿದ್ದಾರೆ.

error: Content is protected !!