ಹುಣಸೆ ಹಣ್ಣಿನ ಗೊಜ್ಜು ಮಾಡುವ ವಿಧಾನ

July 2, 2021

ಬೇಕಾಗುವ ಸಾಮಾಗ್ರಿಗಳು : 10 – ಕೆಂಪು ಮೆಣಸು, 1 ಚಮಚ ಮೆಂತೆೆ ಬೀಜ, 1 ಮುಷ್ಟಿಯಷ್ಟು ರಾತ್ರಿ ನೆನೆ ಹಾಕಿದ ಹುುಣಸೆ ಹಣ್ಣು, 1 – ಕತ್ತರಿಸಿದ ಈರುಳ್ಳಿ, 2 ಚಮಚ ಜೀರಿಗೆೆ, ಅಗತ್ಯಕ್ಕೆ ತಕ್ಕಷ್ಟು ಎಣ್ಣೆ, ಅಗತ್ಯಕ್ಕೆ ತಕ್ಕಷ್ಟು ಕರಿಬೇವು, 1 ಚಮಚ ಸಾಸಿವೆ, ಅಗತ್ಯಕ್ಕೆ ತಕ್ಕಷ್ಟು ಅರಿಶಿಣ, 2 ಚಮಚ ಬೆಲ್ಲ, ಅಗತ್ಯಕ್ಕೆ ತಕ್ಕಷ್ಟು ಉಪ್ಪು, ಅಗತ್ಯಕ್ಕೆ ತಕ್ಕಷ್ಟು ನೀರು.

ಮಾಡುವ ವಿಧಾನ : ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಸೇರಿಸಿ ಬಿಸಿ ಮಾಡಿ. ಬಿಸಿಯಾದ ಎಣ್ಣೆಗೆ ಕೆಂಪು ಮೆಣಸು/ ಒಣ ಮೆಣಸನ್ನು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಜೀರಿಗೆ ಮತ್ತು ಮೆಂತ್ಯ ಬೀಜವನ್ನು ಸೇರಿಸಿ, ಚೆನ್ನಾಗಿ ಹುರಿದುಕೊಳ್ಳಿ. ಬಳಿಕ ಹುರಿದುಕೊಂಡ ಸಾಮಾಗ್ರಿಗಳನ್ನು ಮಿಕ್ಸರ್ ಪಾತ್ರೆಗೆ ಸೇರಿಸಿ, ಚೆನ್ನಾಗಿ ಪುಡಿಮಾಡಿಕೊಳ್ಳಿ. ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಸೇರಿಸಿ ಬಿಸಿ ಮಾಡಿ. ಬಿಸಿಯಾದ ಎಣ್ಣೆಗೆ ಸಾಸಿವೆ, ಜೀರಿಗೆ ಮತ್ತು ಅರಿಶಿಣ ಸೇರಿಸಿ ಒಂದು ನಿಮಿಷಗಳ ಕಾಲ ಹುರಿಯಿರಿ. ಬಳಿಕ ಕರಿಬೇವಿನ ಎಲೆಯನ್ನು ಸೇರಿಸಿ, ಉರಿಯನ್ನು ಆರಿಸಿ. ಒಂದು ಬಟ್ಟಲಿನಲ್ಲಿ ಹುಣಸೆ ಹಣ್ಣಿನ ರಸವನ್ನು ಕಿವಿಚಿಕೊಳ್ಳಿ. ನಂತರ ಅಷ್ಟೇ ಪ್ರಮಾಣದಲ್ಲಿ ಬೆಲ್ಲವನ್ನು ಸೇರಿಸಿ. ಮಿಶ್ರಣಕ್ಕೆ ಉಪ್ಪು ಮತ್ತು ಈರುಳ್ಳಿಯನ್ನು ಸೇರಿಸಿ. ಸ್ವಲ್ಪ ನೀರನ್ನು ಸೇರಿಸಿ, ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಗೊಳಿಸಿ.ಈ ಮೊದಲು ಪುಡಿಮಾಡಿಕೊಂಡ ಮೆಣಸಿನಕಾಯಿ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ. ನಂತರ ಒಂದು ಒಗ್ಗರಣೆಯನ್ನು ಹಾಕಿ. ಸಿದ್ಧವಾದ ಹುಣಸೆ ಗೊಜ್ಜನ್ನು ಬಿಸಿ ಅನ್ನ ಅಥವಾ ರಾಗಿ ಮುದ್ದೆಯೊಂದಿಗೆ ಸವಿಯಲು ನೀಡಿ.

error: Content is protected !!