ಸೌಂದರ್ಯ ಭರಿತ ತ್ವಚೆಗೆ ಮಸೂರ ಬೇಳೆಯ ಫೇಸ್ ಪ್ಯಾಕ್

July 8, 2021

ನಾವು ಸಾಧಾರಣವಾಗಿ ಪ್ರತಿ ದಿನ ಬೇಳೆ ಸಾರು ತಯಾರು ಮಾಡಲು ಉಪಯೋಗಿಸುವ ಹಳದಿ ಬಣ್ಣದ ತೊಗರಿ ಬೇಳೆಗೆ ಹೋಲಿಸಿದರೆ ಕಿತ್ತಳೆ ಹಣ್ಣಿನ ಬಣ್ಣವನ್ನು ಹೊಂದಿರುವ ಮಸೂರ ಬೇಳೆ ಸಾಂಬಾರ್ ಗೆ ಹೊಸ ರುಚಿಯನ್ನು ಕೊಡುತ್ತದೆ ಎಂದು ನಿರೀಕ್ಷೆ ಮಾಡಬಹುದು.

ಇದರ ಪ್ರಯೋಜನ ಕೇವಲ ನಾಲಿಗೆಯ ರುಚಿಗಷ್ಟೇ ಸೀಮಿತವಾಗಿಲ್ಲ. ಮುಖದ ಭಾಗದ ತ್ವಚೆಯನ್ನು ಸೌಂದರ್ಯ ಭರಿತವಾಗಿ ಮಾಡುವ ಜೊತೆಗೆ ಮುಖದ ಮೇಲಿನ ಸುಕ್ಕುಗಳು ಹಾಗೂ ಕಲೆಗಳನ್ನು ದೂರ ಮಾಡಿ ಹೊಳಪಿನ ತ್ವಚೆ ಸಿಗುವಂತೆ ಮಾಡುತ್ತದೆ.

ವಿವಿಧ ಬಗೆಯ ಫೇಸ್ ಪ್ಯಾಕ್ ಗಳನ್ನು ನೀವು ಅದಾಗಲೇ ಟ್ರೈ ಮಾಡಿರುತ್ತೀರಿ. ಆದರೆ ಮೊದಲ ಬಾರಿಗೆ ಮಸೂರ ಬೇಳೆಯ ಮುಖದ ಮಾಸ್ಕ್ ನಿಮಗೆ ಹೊಸ ಅನುಭವವನ್ನು ಉಂಟು ಮಾಡುವುದು ಮಾತ್ರವಲ್ಲದೆ ಇದರಲ್ಲಿ ನೀವು ಬೆರೆಸುವ ಹಾಲು ನಿಮ್ಮ ಸೌಂದರ್ಯವನ್ನು ಹೆಚ್ಚು ಮಾಡುತ್ತದೆ.

ನೀವು ಒಂದು ಬಟ್ಟಲು ತೆಗೆದುಕೊಂಡು ನಿಮ್ಮ ಅನುಕೂಲಕ್ಕೆ ತಕ್ಕಂತೆ ಹಾಲಿನ ಜೊತೆ ಮಸೂರ ಬೇಳೆ ಮಿಶ್ರಣ ಮಾಡಿಕೊಂಡು ಗಟ್ಟಿಯಾದ ಪೇಸ್ಟ್ ತಯಾರು ಮಾಡಿಕೊಳ್ಳಬೇಕು. ನಂತರ ನಿಮ್ಮ ತ್ವಚೆಯ ಮೇಲೆ ಇದನ್ನು ಸ್ಕ್ರಬ್ ರೀತಿ ಬಳಕೆ ಮಾಡಿ ಸ್ವಲ್ಪ ಹೊತ್ತಿನ ತನಕ ನಿಮ್ಮ ಮುಖದ ತ್ವಚೆಯ ಮೇಲ್ಭಾಗದಲ್ಲಿ ಇದು ಹಾಗೆ ಉಳಿಯುವಂತೆ ನೋಡಿಕೊಂಡು ಸ್ವಲ್ಪ ಹೊತ್ತು ಒಣಗಲು ಬಿಡಿ. ನಂತರ ತಂಪಾದ ನೀರಿನಲ್ಲಿ ಮುಖ ತೊಳೆದುಕೊಂಡು ತ್ವಚೆಗೆ ಮಾಯಿಶ್ಚರೈಸ್ ಮಾಡಿ.

ತ್ವಚೆಯ ಮೇಲ್ಭಾಗದಲ್ಲಿ ಕಂಡು ಬರುವ ಸತ್ತ ಜೀವ ಕೋಶಗಳನ್ನು ತೆಗೆದುಹಾಕುವ ಜೊತೆಗೆ ಹೊರಗಿನ ಮಾಲಿನ್ಯಕಾರಕ ಅಂಶಗಳು ಚರ್ಮದ ರಂಧ್ರಗಳಲ್ಲಿ ಸಿಲುಕಿ ಹಾಕಿಕೊಂಡು ಚರ್ಮದ ಭಾಗದಿಂದ ಅತಿಯಾದ ಎಣ್ಣೆಯ ಅಂಶವನ್ನು ಸ್ರವಿಸಿ ಮೊಡವೆಗಳು ಮತ್ತು ಬ್ಲ್ಯಾಕ್ ಹೆಡ್ಸ್ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುತ್ತದೆ. ಈ ಫೇಸ್ ಮಾಸ್ಕ್ ನೈಸರ್ಗಿಕ ಮಾಯಿಶ್ಚರೈಸರ್ ಹಾಗೆ ಕೆಲಸ ಮಾಡುತ್ತದೆ. ಕಲೆ ರಹಿತ ಹಾಗೂ ಹೊಳಪಿನ ತ್ವಚೆ ನಿಮ್ಮದಾಗುತ್ತದೆ.

ಕೆಲವರಿಗೆ ಮುಖದ ಭಾಗದ ತ್ವಚೆಯಲ್ಲಿ ಸುಕ್ಕುಗಳು ಹಾಗೂ ಗೆರೆಗಳು ಕಂಡು ಬರುತ್ತವೆ. ಇವುಗಳ ಕಾರಣದಿಂದ ಬಹಳ ಚಿಕ್ಕ ವಯಸ್ಸಿಗೆ ಹೆಚ್ಚು ವಯಸ್ಸಾದಂತೆ ಕಾಣುತ್ತಾರೆ.
ಇಂತಹ ಒಂದು ಸಾಧ್ಯತೆಯಿಂದ ತಪ್ಪಿಸಲು ಮುಖದ ಭಾಗದ ಚರ್ಮವನ್ನು ಬಿಗಿ ಆಗಿಸುವ ಪ್ರಯತ್ನ ಮಾಡಬೇಕು. ಅದಕ್ಕೆ ಅನುಗುಣವಾಗಿ ನೀವು ಬಳಸುವ ಮಸೂರ ಬೇಳೆಯ ಫೇಸ್ ಪ್ಯಾಕ್ ಗೆ ಕೋಳಿ ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಬೇಕು.
ಇದು ನೈಸರ್ಗಿಕವಾದ ಪ್ರಭಾವವನ್ನು ಉಂಟು ಮಾಡುವುದು ಮಾತ್ರವಲ್ಲದೆ ಮುಖದ ಭಾಗದ ಚರ್ಮದಲ್ಲಿ ಕಂಡು ಬರುವ ರಂದ್ರಗಳ ಗಾತ್ರವನ್ನು ತಗ್ಗಿಸಿ ಪ್ರೋಟೀನ್ ಮತ್ತು ಅಲುಮಿನಿಯಂ ಅಂಶಗಳನ್ನು ನಿಮ್ಮ ಮುಖದ ಭಾಗದ ತ್ವಚೆಗೆ ಒದಗಿಸಿ ಚರ್ಮದ ಹೊಳಪನ್ನು ಹೆಚ್ಚಿಸಿ ನಿಮ್ಮ ಮುಖವನ್ನು ಸುಕ್ಕು ರಹಿತವನ್ನಾಗಿ ಮಾಡುತ್ತದೆ.

ಒಂದು ವೇಳೆ ನಿಮ್ಮ ಚರ್ಮ ಒಣಗಿದ ಅನುಭವ ಉಂಟಾಗುತ್ತಿದ್ದರೆ, ಅಥವಾ ಒಣ ಚರ್ಮ ನಿಮ್ಮದಾಗಿದ್ದರೆ, ಚರ್ಮದ ಭಾಗಕ್ಕೆ ಹೆಚ್ಚಿನ ತೇವಾಂಶವನ್ನು ಒದಗಿಸಬೇಕು ಎಂದುಕೊಂಡಿದ್ದರೆ,
ಮಸೂರ ಬೇಳೆಯ ಫೇಸ್ ಪ್ಯಾಕ್ ತಯಾರು ಮಾಡುವ ಸಂದರ್ಭದಲ್ಲಿ ಅದಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ಕೆಲವು ಹನಿಗಳಷ್ಟು ಆಪಲ್ ಸೈಡರ್ ವಿನೆಗರ್ ಮತ್ತು ಸ್ವಲ್ಪ ನೀರು ಸೇರಿಸಿ ಫೇಸ್ ಮಾಸ್ಕ್ ತಯಾರು ಮಾಡಿಕೊಳ್ಳಬಹುದು.

error: Content is protected !!