ರುಚಿರುಚಿಯಾದ ಮಾವಿನಕಾಯಿ ಚಿತ್ರಾನ್ನ ಮಾಡುವ ವಿಧಾನ

July 8, 2021

ಬೇಕಾಗುವ ಸಾಮಾಗ್ರಿಗಳು : 2 ಕಪ್‌ ಬೇಯಿಸಿದ ಅಕ್ಕಿ, 1 ಕಪ್‌ ತುರಿದ ಮಾವಿನಕಾಯಿ, 10 – ಹಸಿಮೆಣಸಿನಕಾಯಿ, ಅಗತ್ಯಕ್ಕೆ ತಕ್ಕಷ್ಟು ಇಂಗು, 1 ಚಮಚ ಹುರಿದ ಕಸೂರು ಮೆಂತೆ ಪುಡಿ, ಅಗತ್ಯಕ್ಕೆ ತಕ್ಕಷ್ಟು ಉಪ್ಪು, ಅಗತ್ಯಕ್ಕೆ ತಕ್ಕಷ್ಟು ಅರಿಶಿಣ, 1/2 ಕಪ್‌ ಸಂಸ್ಕರಿಸಿದ ಎಣ್ಣೆ, 1 ಚಮಚ ಸಾಸಿವೆ, 1 ಚಮಚ ಉದ್ದಿನ ಬೇಳೆ, 1/2 ಕಪ್‌ ಹುರಿದ ನೆಲಗಡಲೆ, ಅಗತ್ಯಕ್ಕೆ ತಕ್ಕಷ್ಟು ಕರಿಬೇವು
10 ಎಲೆಗಳು ಕತ್ತರಿಸಿದ ಕೊತ್ತಂಬರಿ ಸೊಪ್ಪು.

ಮಾಡುವ ವಿಧಾನ : ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.- ಎಣ್ಣೆ ಬಿಸಿಯಾದ ಬಳಿಕ ಸಾಸಿವೆ, ಉದ್ದಿನ ಬೇಳೆ, ಶೇಂಗಾ ಸೇರಿಸಿ 2-3 ನಿಮಿಷಗಳ ಕಾಲ ಬೇಯಿಸಿ. ರುಬ್ಬಿಕೊಂಡ ಪೇಸ್ಟ್ ಮತ್ತು ಕರಿಬೇವಿನ ಎಲೆಯನ್ನು ಸೇರಿಸಿ 2 ನಿಮಿಷಗಳ ಕಾಲ ಬೇಯಿಸಿ.- ನಂತರ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು, ಮೇಥಿ ಪುಡಿ, ಅನ್ನ ಮತ್ತು ತುರಿದ ಮಾವಿನಕಾಯಿಯನ್ನು ಸೇರಿಸಿ, ಮಿಶ್ರಗೊಳಿಸಿ.- ಮಾವಿನಕಾಯಿ ಅತಿಯಾದ ಹುಳಿಯನ್ನು ಹೊಂದಿದ್ದರೆ ಒಂದು ಟೀ ಚಮಚ ಸಕ್ಕರೆಯನ್ನು ಸೇರಿಸಬಹುದು. ತೆಂಗಿನ ತುರಿ ಮತ್ತು ಉಪ್ಪನ್ನು ಸೇರಿಸಿ, ಎಲ್ಲಾ ಪದಾರ್ಥಗಳು ಅನ್ನಕ್ಕೆ ಹಿಡಿದುಕೊಳ್ಳುವ ಹಾಗೆ ಬೆರೆಸಿ. – ನಂತರ ಉರಿಯನ್ನು ಆರಿಸಿ. ಬಿಸಿ ಬಿಸಿಯಾದ ಚಿತ್ರಾನ್ನವನ್ನು ಚಟ್ನಿಯೊಂದಿಗೆ ಸವಿಯಲು ನೀಡಿ.

error: Content is protected !!