ಮುಖದ ಸೌಂದರ್ಯ ಹೆಚ್ಚಿಸಲು ಸ್ಟ್ರಾಬೆರಿ ಫೇಸ್ ಮಾಸ್ಕ್

July 10, 2021

ಸ್ಟ್ರಾಬೆರಿ ಹಣ್ಣನ್ನು ಬಳಸಿಕೊಂಡು ಫೇಸ್ ಮಾಸ್ಕ್ ಬಳಕೆ ಮಾಡಬಹುದು. ಸ್ಟ್ರಾಬೆರಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳಿದ್ದು, ಇದನ್ನು ಬಳಸಿದರೆ ತ್ವಚೆಗೆ ಕಾಂತಿ ಸಿಗುವುದು. ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ, ಫಾಲಿಕ್ ಆಮ್ಲ ಇತ್ಯಾದಿಗಳು ಇವೆ. ಇದು ತ್ವಚೆಗೆ ಕಾಂತಿ ನೀಡುವ ಜತೆಗೆ ತೇವಾಂಶವನ್ನು ಕಾಪಾಡುವುದು.

ಅಕಾಲಿಕವಾಗಿ ವಯಸ್ಸಾಗುವ ಲಕ್ಷಣಗಳು ಕಾಣಿಸದೆ ಇದ್ದರೆ ಆಗ ನೀವು ಸ್ಟ್ರಾಬೆರಿಯನ್ನು ಬಳಸಲೇಬೇಕು. ಒಂದು ಕಪ್ ಸ್ಟ್ರಾಬೆರಿಯನ್ನು ಒಂದು ಚಮಚ ಮೊಸರಿಗೆ ಹಾಕಿಕೊಂಡು ಪೇಸ್ಟ್ ಮಾಡಿ.

ಇದನ್ನು ಪೇಸ್ಟ್ ಮಾಡಿಕೊಂಡ ಬಳಿಕ ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು ವಾರದಲ್ಲಿ ಎರಡು ದಿನ ಬಳಸಿಕೊಂಡರೆ ತುಂಬಾ ಲಾಭಕಾರಿ.

ನಯವಾಗಿರುವ ಹಾಗೂ ಆರೋಗ್ಯಕಾರಿ ಚರ್ಮಕ್ಕೆ ಇವೆರಡನ್ನು ಬಳಸಬೇಕು. ಸ್ಟ್ರಾಬೆರಿಯನ್ನು ಸರಿಯಾಗಿ ಜಜ್ಜಿಕೊಂಡು ಅದನ್ನು ಕೋಕಾ ಹುಡಿಯ ಜತೆಗೆ ಬೆರೆಸಿಕೊಂಡು, ಅದನ್ನು ಮುಖಕ್ಕೆ ಹಚ್ಚಿಕೊಳ್ಳಬೇಕು.

ಇದರಿಂದ ಚರ್ಮಕ್ಕೆ ಕಾಂತಿ ಸಿಗುವುದು. 20 ನಿಮಿಷ ಹಾಗೆ ಬಿಟ್ಟು, ಇದರ ಬಳಿಕ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ಇದರಿಂದ ತ್ವಚೆಯು ಸುಂದರವಾಗುವುದು.

​ಸ್ಟ್ರಾಬೆರಿ ಮತ್ತು ಜೇನುತುಪ್ಪ

 ತ್ವಚೆಗೆ ಅದ್ಭುತವಾಗಿ ಕೆಲಸ ಮಾಡುವುದು. ಚರ್ಮದಲ್ಲಿ ಮೊಡವೆ ಹಾಗೂ ಬೊಕ್ಕೆಗಳು ಇದ್ದರೆ ನೀವು ಇದನ್ನು ಬಳಸಿಕೊಳ್ಳಿ. ಇವೆರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ.

ಜೇನುತುಪ್ಪದಲ್ಲಿ ಒಳ್ಳೆಯ ಆಂಟಿಆಕ್ಸಿಡೆಂಟ್ ಅಂಶವಿದ್ದು, ಇದು ಚರ್ಮಕ್ಕೆ ಕಾಂತಿ ನೀಡಲು ಸಹಕಾರಿ. ಸ್ಟ್ರಾಬೆರಿಗೆ ಜೇನುತುಪ್ಪವನ್ನು ಬೆರೆಸಿಕೊಂಡು ನಿಯಮಿತವಾಗಿ ಹಚ್ಚಿಕೊಂಡರೆ ಆಗ ಇದು ನೈಸರ್ಗಿಕ ಕಾಂತಿ ನೀಡುವುದು.

ಇದು ಮೊಡವೆ ತಡೆಯುವ ಶಕ್ತಿ ಹೊಂದಿದೆ. ಇದನ್ನು ಹಚ್ಚಿಕೊಂಡು 20 ನಿಮಿಷ ಕಾಲ ಹಾಗೆ ಬಿಡಿ ಮತ್ತು ಇದರ ಬಳಿಕ ಬಿಸಿ ನೀರಿನಿಂದ ಮುಖ ತೊಳೆಯಿರಿ.

error: Content is protected !!