ಬೇವಿನ ಹತ್ತು ಅದ್ಭುತ ಪ್ರಯೋಜನಗಳು

July 12, 2021

ಆಯುರ್ವೇದದ ಜಗತ್ತಿನಲ್ಲಿ, ಬೇವು ಒಂದು ಜನಪ್ರಿಯ ಔಷಧಿಯ ಸಸ್ಯವಾಗಿದೆ. ಇದು ಸುಮಾರು 5000 ವರ್ಷಗಳ ಹಿಂದಿನ ಸಾಂಪ್ರದಾಯಿಕ ಪರಿಹಾರಗಳ ಒಂದು ಭಾಗವಾಗಿದೆ. ಸಂಸ್ಕೃತದಲ್ಲಿ ನಿಂಬಾ ಎಂದು ಕರೆಯಲ್ಪಡುವ ಬೇವಿನ ಮರವು ಪ್ರಕೃತಿ ಸಮಸ್ಯೆ ಮತ್ತು ಚಿಕಿತ್ಸೆ ಎರಡನ್ನೂ ಸಹ ನಿಭಾಯಿಸುತ್ತದೆ. ಇದು 130ಕ್ಕೂ ಹೆಚ್ಚು ವಿಭಿನ್ನ ಜೈವಿಕವಾಗಿ ಸಕ್ರಿಯವಾಗಿರುವ ಸಂಯುಕ್ತಗಳಿಗೆ ನೆಲೆಯಾಗಿದೆ.ಇದು ಪರಿಣಾಮಕಾರಿಯಾದ ಆಂಟಿ ವೈರಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಎಂಬುದು ನಿಮಗೆ ಈಗಾಗಲೇ ತಿಳಿದಿರುವ ವಿಷಯವಾಗಿದೆ.

ಬೇವಿನ ಎಲೆಗಳ ಪ್ರಾಥಮಿಕ ಉದ್ದೇಶ ಅಸ್ವಸ್ಥತೆಗಳು ಅಥವಾ ನರಸ್ನಾಯುಕ ಚಿಕಿತ್ಸೆಯನ್ನು ಇದು ಸೂಚಿಸುತ್ತದೆ.ಇದು ರಕ್ತವನ್ನು ಶುದ್ಧೀಕರಿಸಿ ಸ್ವತಂತ್ರ ರಾಡಿಕಲ್ ಗಳಿಂದ ಉಂಟಾಗುವ ಹಾನಿಯನ್ನು ತಡೆಯುತ್ತದೆ. ಜೀವಾಣು ವಿಷವನ್ನು ತೆಗೆದು ಹಾಕಿ, ಕೀಟಗಳ ಕಡಿತ ಮತ್ತು ಹುಣ್ಣುಗಳಿಗೆ ಚಿಕಿತ್ಸೆ ನೀಡುತ್ತದೆ. ಬೇವಿನ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ. ಅದಕ್ಕಾಗಿಯೇ ಇದು ಸೋಂಕುಗಳು, ಸುಡುವಿಕೆಗಳು ಮತ್ತು ಯಾವುದೇ ರೀತಿಯ ಚರ್ಮದ ಸಮಸ್ಯೆಗಳ ಬಗ್ಗೆ ಇರುವ ತೊಂದರೆಗಳನ್ನು ನಿವಾರಿಸುತ್ತದೆ.

ಬೇವಿನ ಎಲೆಗಳಿಂದ ದೊರೆಯುವ ಉಪಯೋಗ :

ಬೇವಿನ ಎಲೆಗಳಿಂದ ಪೇಸ್ಟ್ ತಯಾರಿಸಿ ಅದನ್ನು ನಿಮ್ಮ ಗಾಯಗಳ ಮೇಲೆ ಹಾಕಿ ಅಥವಾ ಕೀಟಗಳು ಗುಣವಾಗುವವರೆಗೆ ದಿನಕ್ಕೆ ಹಲವು ಬಾರಿ ಹಚ್ಚುತ್ತಿರಿ.ಗಾಯಗಳನ್ನು ಗುಣಪಡಿಸುವುದರ ಜೊತೆಗೆ ಇದು ತಲೆಯಲ್ಲಿರುವ ಹೊಟ್ಟಿನ ಸಮಸ್ಯೆಯನ್ನು ಸಹ ನಿವಾರಿಸುತ್ತದೆ. ಬೇವಿನ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಹಸಿರು ಬಣ್ಣಕ್ಕೆ ಬರುವವರೆಗೂ ಬಿಡಿ. ಇದನ್ನು ತಣ್ಣಗಾಗಲು ಬಿಡಿ. ಅನಂತರದಲ್ಲಿ ಇದನ್ನು ನಿಮ್ಮ ಕೂದಲಿಗೆ ಹಚ್ಚಿ. ನಂತರ ಶ್ಯಾಂಪೂವಿನಿಂದ ನಿಮ್ಮ ಕೂದಲನ್ನು ಸ್ವಚ್ಛಗೊಳಿಸಿ.ಬೇವಿನ ಎಲೆಗಳನ್ನು ಪುಡಿಮಾಡಿ ಪೇಸ್ಟ್ ಮಾಡಿ ಮತ್ತು ಮೊಡವೆಗಳು ಇರುವ ಜಾಗಕ್ಕೆ ಪ್ರತಿದಿನ ಹಚ್ಚಿರಿ. ಯಾವುದೇ ರೀತಿಯ ಮೊಡವೆಗಳು, ಕಪ್ಪು ಕಲೆಗಳು ಮತ್ತು ದೀರ್ಘಕಾಲದ ಹುಣ್ಣುಗಳಿಗೆ ಇದು ಸಹಾಯಮಾಡುತ್ತದೆ.

ಯಾವುದೇ ರೀತಿಯ ಚರ್ಮದ ಸಮಸ್ಯೆಗೆ ಸಂಬಂಧಿಸಿದ ಕಾಯಿಲೆಗಳಿಗೆ ಇದು ಪರಿಹಾರವನ್ನು ನೀಡುತ್ತದೆ.ಯಾವುದೇ ರೀತಿಯ ಚರ್ಮದ ಸಮಸ್ಯೆ ಇದ್ದರೂ ನೀವು ಬೇವಿನ ಎಲೆಗಳನ್ನು ಚೆನ್ನಾಗಿ ಪುಡಿ ಮಾಡಿ ಅದನ್ನು ನಿಮ್ಮ ಚರ್ಮಕ್ಕೆ ಹೊಂದುವ ಪದಾರ್ಥಗಳೊಂದಿಗೆ ಮಿಶ್ರಣಮಾಡಿ ಅನಂತರದಲ್ಲಿ ನೀವು ಪ್ರತಿನಿತ್ಯ ನಿಮ್ಮ ಚರ್ಮಕ್ಕೆ ಹಚ್ಚುತ್ತಾ ಬಂದರೆ ಯಾವುದೇ ರೀತಿಯ ಚರ್ಮ ಸಂಬಂಧಿ ಸಮಸ್ಯೆಗಳಿದ್ದರೂ ಅದನ್ನು ಹೋಗಲಾಡಿಸುತ್ತದೆ.ಅಲ್ಲದೆ ಹಲವಾರು ರೀತಿಯ ಚರ್ಮ ಸಂಬಂಧಿ ಉತ್ಪನ್ನಗಳನ್ನು ತಯಾರಿಸುವ ಸಂದರ್ಭದಲ್ಲಿಯೂ ಸಹ ಬೇವಿನ ಎಲೆಗಳನ್ನು ಬಳಸಲಾಗುತ್ತದೆ.

ಕಿವಿ ನೋವಿಗೂ ಸಹ ಇದನ್ನು ಪರಿಹಾರವಾಗಿ ಬಳಸಲಾಗುತ್ತದೆ. ಬೇವಿನ ಮಿಶ್ರಣಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಅದನ್ನು ಕಿವಿಯೊಳಗೆ ಹಾಕುವುದರಿಂದ ಕಿವಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಪರಿಹಾರ ದೊರೆಯುತ್ತದೆ.ಚರ್ಮ ಸಮಸ್ಯೆಯನ್ನು ಹೊಂದಿದ್ದರೆ ಬೇವಿನಸೊಪ್ಪಿನ ಫೇಸ್ ನೊಂದಿಗೆ ಸ್ವಲ್ಪ ಅರಿಶಿನವನ್ನು ಸೇರಿಸಿ ಸಮಸ್ಯೆ ಇರುವ ಜಾಗಕ್ಕೆ ಹಚ್ಚುವುದರಿಂದ ನಿಮ್ಮ ಚರ್ಮ ಸಂಬಂಧಿ ಸಮಸ್ಯೆಗೆ ತ್ವರಿತ ಪರಿಹಾರ ದೊರೆಯುತ್ತದೆ. ಯಾವುದೇ ರೀತಿಯ ತುರಿಕೆಗಳು, ಚರ್ಮದ ಮೇಲೆ ಕಲೆ ಆಗುವಿಕೆ ಮತ್ತು ಸೂಕ್ಷ್ಮ ಚರ್ಮ ಹೊಂದಿರುವವರು ಸಹ ಇದನ್ನು ಬಳಸಬಹುದು. ಬೇವಿನ ಸೊಪ್ಪು ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಇದು ಉತ್ತಮ ಆರೋಗ್ಯವನ್ನು ಸಹ ನೀಡುತ್ತದೆ.

ಬೇವಿನ ಎಲೆಗಳನ್ನು ಪುಡಿಮಾಡಿ ದಿನನಿತ್ಯದಲ್ಲಿ ಸ್ವಲ್ಪ ಸೇವಿಸುತ್ತಾ ಬಂದರೆ ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ಬಹುತೇಕ ಜನರು ಬೇವು ಕಹಿ ಇರುವ ಕಾರಣ ಸೇವಿಸಲು ಹಿಂಜರಿಯುತ್ತಾರೆ.ಆದರೆ ಯಾವಾಗಲೂ ಬಾಯಿಗೆ ಕಹಿಯಾಗಿರುವುದು ದೇಹಕ್ಕೆ ಉತ್ತಮವಾದ ಆರೋಗ್ಯವನ್ನು ನೀಡುತ್ತದೆ ಎಂಬುದನ್ನು ನೀವು ಗಮನದಲ್ಲಿಟ್ಟುಕೊಳ್ಳಿ.ಆದ್ದರಿಂದ ನೇರವಾಗಿ ನಿಮಗೆ ಸೇವಿಸಲು ಸಾಧ್ಯವಾಗದಿದ್ದರೆ ಒಂದು ಲೋಟ ನೀರಿಗೆ ಸ್ವಲ್ಪ ಬೇವಿನ ಪುಡಿಯನ್ನು ಸೇರಿಸಿ ಕುಡಿಯಿರಿ.

ಬೇವಿನ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.ಅದಕ್ಕಾಗಿಯೇ ಇದು ಯಾವುದೇ ರೀತಿಯ ಸೋಂಕು ಇದ್ದರೂ ಅದನ್ನು ಗುಣಪಡಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಬೇವಿನ ಹೂವುಗಳು ಸಹ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಬಿಳಿ ಮತ್ತು ಸೂಕ್ಷ್ಮವಾದ ಬೇವಿನ ಹೂವುಗಳನ್ನು ಅವುಗಳ ಮೊಗ್ಗುಗಳೊಂದಿಗೆ ತಿನ್ನಲು ತುಂಬಾ ಉತ್ತಮವಾಗಿರುತ್ತದೆ. ಬೇರೆ ಸಮಯದಲ್ಲಿ ಇದರ ಹೂವುಗಳನ್ನು ಸಹ ಬಳಸಲಾಗುತ್ತದೆ.ಇದನ್ನು ಯಥೇಚ್ಛವಾಗಿ ಬಳಸಲು ಕಾರಣ ಇದು ಹೊಂದಿರುವ ಉತ್ತಮ ಗುಣಗಳು ಪ್ರಮುಖ ಕಾರಣವಾಗಿದೆ.

ಬೇವಿನ ಎಲೆಯನ್ನು ಪ್ರತಿನಿತ್ಯ ಒಂದು ಎಲೆಯನ್ನು ಸೇವಿಸುವುದರಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ನಿಮಗೆ ಬರುವುದಿಲ್ಲ.ನಮ್ಮ ಪೂರ್ವಜರು ಮಾಡಿದ ಎಲ್ಲ ಆಚರಣೆಗಳಲ್ಲಿ ಒಂದಲ್ಲ ಒಂದು ರೀತಿಯ ಉತ್ತಮವಾದ ಆರೋಗ್ಯವನ್ನು ನೀಡುವ ಅಭ್ಯಾಸಗಳಿವೆ.ಬೇವಿನ ಎಲೆಯಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಗುಣವು ನಮ್ಮ ದೇಹದಲ್ಲಿರುವ ಅನಗತ್ಯ ಕೆಟ್ಟ ಅಂಶಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ.ಆದ್ದರಿಂದ ಪ್ರತಿ ದಿನವೂ ಒಂದು ಬೇವಿನ ಎಲೆಯನ್ನು ಜಗಿದು ತಿನ್ನುವ ಮೂಲಕ ಉತ್ತಮವಾದ ಆರೋಗ್ಯವನ್ನು ನಾವು ಹೊಂದಬಹುದು. ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನವರೇ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಹ ಪರಿಸ್ಥಿತಿ ಎದುರಾಗಿದೆ.

error: Content is protected !!