ಹೆಬ್ಬಾಲೆಯಲ್ಲಿ ಘಟನೆ : ವಿವಾಹಿತ ಜೋಡಿಯ ಆತ್ಮಹತ್ಯೆ : ಮಹಿಳೆ ಸಾವು, ಪುರುಷ ಚಿಂತಾಜನಕ

July 13, 2021

ಮಡಿಕೇರಿ ಜು.13 : ವಿವಾಹಿತ ಜೋಡಿಯೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಮಹಿಳೆ ಮೃತಪಟ್ಟು ಪುರುಷ ಚಿಂತಾಜನಕ ಸ್ಥಿತಿಯಲ್ಲಿರುವ ಘಟನೆ ಕುಶಾಲನಗರ ಸಮೀಪ ಹೆಬ್ಬಾಲೆ ಗ್ರಾಮದಲ್ಲಿ ನಡೆದಿದೆ.
ಪಿರಿಯಾಪಟ್ಟಣ ತಾಲ್ಲೂಕಿನ ಕಣಗಾಲು ಗ್ರಾಮದ ನಿವಾಸಿ ವಿಶ್ವನಾಥ್(35) ಹಾಗೂ ಚಿಕ್ಕನೇರಳ ಗ್ರಾಮದ ವಿದ್ಯಾ(29) ವಿಷ ಸೇವಿಸಿದ್ದು, ವಿದ್ಯಾ ಸಾವನ್ನಪ್ಪಿದ್ದಾಳೆ. ಇಬ್ಬರ ನಡುವಿನ ಸಂಬಂಧ ಅನಾಹುತಕ್ಕೆ ಕಾರಣವೆಂದು ಹೇಳಲಾಗಿದ್ದು, ಇಬ್ಬರಿಗೂ ತಲಾ ಇಬ್ಬರು ಮಕ್ಕಳಿದ್ದಾರೆ.
ಒಂದು ತಿಂಗಳ ಹಿಂದೆ ಮನೆಯವರನ್ನು ಬಿಟ್ಟು ಬಂದ ಜೋಡಿ ಕುಶಾಲನಗರದ ಸುಂದರನಗರದಲ್ಲಿ ವಾಸವಾಗಿತ್ತು. ಆದರೆ ಇಂದು ವಿಶ್ವನಾಥನ ಕಾರಿನಲ್ಲಿ ಹೆಬ್ಬಾಲೆಗೆ ಬಂದ ಜೋಡಿ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದೆ.
ಚಿಂತಾಜನಕ ಸ್ಥಿತಿಯಲ್ಲಿದ್ದ ಇಬ್ಬರನ್ನು ಪಿರಿಯಾಪಟ್ಟಣ ಆಸ್ಪತ್ರೆಯಲ್ಲಿ ದಾಖಲಿಸಲಾಯಿತ್ತಾದರೂ ವಿದ್ಯಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ವಿಶ್ವನಾಥ್ ನನ್ನು ಮೈಸೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!