ತೋಟದಲ್ಲಿ ಗಾಂಜಾ ಬೆಳೆದ ಐವತ್ತೊಕ್ಲು ಗ್ರಾಮದ ವ್ಯಕ್ತಿಯ ಬಂಧನ

July 14, 2021

ಮಡಿಕೇರಿ ಜು.14 : ಐವತ್ತೊಕ್ಲು ಗ್ರಾಮದ ಕಾಫಿ ತೋಟವೊಂದರಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಪ್ರಕರಣವನ್ನು ಭಾಗಮಂಡಲ ಠಾಣೆ ಪೊಲೀಸರು ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಭಾಗಮಂಡಲ ಪೊಲೀಸ್ ಠಾಣಾ ಸರಹದ್ದಿನ ಐವತ್ತೊಕ್ಲು ಗ್ರಾಮದ ಕಾಫಿ ತೋಟದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಭಾಗಮಂಡಲ ಠಾಣಾ ಪಿಎಸ್ಐ ಅವರ ನೇತೃತ್ವದ ತಂಡವು ಐವತೊಕ್ಲು ಗ್ರಾಮದ ನಿವಾಸಿ ಪಿ.ಎಸ್. ವಿಜಯ ಮೇದಪ್ಪ ಎಂಬುವ ವರನ್ನು ವಶಕ್ಕೆ ಪಡೆದು ಸುಮಾರು 1,680 ಗ್ರಾಂ ತೂಕದ ಒಟ್ಟು 23 ಸಾವಿರ ಮೌಲ್ಯದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗಮಂಡಲ ಠಾಣಾ ಪಿಎಸ್ಐ ಹೆಚ್.ಕೆ. ಮಹದೇವ್, ಸಿಬ್ಬಂದಿಗಳಾದ ಎಂ.ಬಿ. ಶಿವರಾಮ್ , ನಂಜುಂಡ ಎನ್.ಕೆ, ಇಬ್ರಾಹಿಂ, ಮಹೇಶ್, ಸುರೇಶ್ ಕುಮಾರ್, ಪುನೀತ್ ಕುಮಾರ್ .ಎನ್.ಆರ್, ಮಹದೇವಸ್ವಾಮಿ ಪಾಲ್ಗೊಂಡಿದ್ದು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.

error: Content is protected !!