ಕರಿಬೇವಿನ ಎಲೆಗಳ ಔಷಧಿ ಗುಣಗಳು

July 15, 2021

ಕರಿಬೇವಿನ ಎಲೆಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ. ಕರಿಬೇವನ್ನು ಆಯುರ್ವೇದದಲ್ಲಿ ಕೂಡ ಔಷಧಿಯಾಗಿ ಬಳಕೆ ಮಾಡಲಾಗಿದೆ. ಅಧಿಕ ರಕ್ತದೊತ್ತಡ, ತೂಕ ಇಳಿಕೆ, ಅಜೀರ್ಣ, ರಕ್ತಹೀನತೆ ಇತ್ಯಾದಿ ಸಮಸ್ಯೆಗಳಿಗೆ ಕರಿಬೇವನ್ನು ಬಳಸಬಹುದು.

ಇದರಲ್ಲಿ ವಿವಿಧ ರೀತಿಯ ವಿಟಮಿನ್ ಗಳು ಮತ್ತು ಖನಿಜಾಂಶಗಳಾಗಿರುವಂತಹ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ಕ್ಯಾಲ್ಸಿಯಂ, ಅಮಿನೋ ಆಮ್ಲ, ನಾರಿನಾಂಶ, ಪೋಸ್ಪರಸ್, ಪ್ರೋಟೀನ್ ಮತ್ತು ಕಬ್ಬಿಣಾಂಶವು ಇದೆ.

ತಾಜಾ ಕರಿಬೇವಿನ ಎಲೆಗಳ ರಸ ತೆಗೆಯಿರಿ ಮತ್ತು ಇದನ್ನು ಒಂದು ಚಮಚ ಲಿಂಬೆ ಮತ್ತು ಚಿಟಿಕೆ ಬೆಲ್ಲಕ್ಕೆ ಹಾಕಿಕೊಂಡು ಸೇವಿಸಿ. ಇದನ್ನು ನಿತ್ಯವೂ ಸೇವನೆ ಮಾಡಿದರೆ ಜೀರ್ಣಕ್ರಿಯೆ ಸ್ರವಿಸುವಿಕೆ ಉತ್ತಮವಾಗುವುದು ಹಾಗೂ ವಾಕರಿಕೆ, ಮಾರ್ನಿಂಗ್ ಸಿಕ್ನೆಸ್ ಮತ್ತು ವಾಂತಿ ಸಮಸ್ಯೆಯು ದೂರವಾಗುವುದು.

ಕರಿಬೇವಿನ ಎಲೆಗಳಲ್ಲಿ ಕಾರ್ಬಜೋಲ್ ಆಲ್ಕಲಾಯ್ಡ್ಸ್ ಎನ್ನುವ ಉರಿಯೂತ ಶಮನಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದು ಹೊಟ್ಟೆಯ ಸಮಸ್ಯೆಯನ್ನು ದೂರ ಮಾಡುವುದು ಮತ್ತು ಅತಿಸಾರವನ್ನು ಕಡಿಮೆ ಮಾಡುವುದು.

ಕರಿಬೇವಿನ ಎಲೆಗಳಲ್ಲಿ ಇರುವಂತಹ ಆಲ್ಕಲಾಯ್ಡ್ ಅಂಶವು ಗಾಯ, ತರುಚಿದ ಗಾಯ, ಸುಟ್ಟ ಗಾಯ, ಬಿಸಿಯಿಂದ ಸುಟ್ಟ ಗಾಯ ಇತ್ಯಾದಿಗಳನ್ನು ನಿವಾರಣೆ ಮಾಡುವುದು.
ಚರ್ಮದಲ್ಲಿನ ತುರಿಕೆ ಕೂಡ ನಿವಾರಿಸುವುದು. ಕರಿಬೇವಿನ ಎಲೆಗಳನ್ನು ಹಾಗೆ ರುಬ್ಬಿಕೊಂಡು ಪೇಸ್ಟ್ ಮಾಡಿ ಮತ್ತು ಇದಕ್ಕೆ ಸ್ವಲ್ಪ ನೀರು ಹಾಕಿ. ಈ ಪೇಸ್ಟ್ ನಲ್ಲಿ ನಂಜುನಿರೋಧಕ ಗುಣಗಳು ಇವೆ ಮತ್ತು ಇದು ಉಪಶಮನಕಾರಿ ಆಗಿ ಕೆಲಸ ಮಾಡುವುದು.

ರಕ್ತಹೀನತೆ ದೂರ ಮಾಡಲು ಕರಿಬೇವಿನ ಎಲೆಗಳು ತುಂಬಾ ಸಹಕಾರಿ. ಇದರಲ್ಲಿ ಫಾಲಿಕ್ ಆಮ್ಲ ಮತ್ತು ಕಬ್ಬಿನಾಂಶವು ಉತ್ತಮ ಪ್ರಮಾಣದಲ್ಲಿದೆ.
ಕಬ್ಬಿಣಾಂಶವು ರಕ್ತದ ಕಣಗಳ ಬೆಳವಣಿಗೆಗೆ ನೆರವಾಗುವುದು.

ಕರಿಬೇವಿನ ಎಲೆಗಳನ್ನು ಹಸಿಯಾಗಿ ಜಗಿದು ತಿನ್ನುವುದು ಅಥವಾ ಕರಿಬೇವಿನ ಎಲೆಗಳ ಟೀ ಮಾಡಿ ಕುಡಿದರೆ, ಅದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಕಡಿಮೆ ಆಗುವುದು ಮತ್ತು ತೂಕ ಏರಿಕೆ ಸಮಸ್ಯೆಯನ್ನು ಇದು ದೂರ ಮಾಡುವುದು. ಇದು ದೇಹದಲ್ಲಿ ಇರುವ ಹಾನಿಕಾರಕ ವಿಷಕಾರಿ ಅಂಶಗಳನ್ನು ದೂರ ಮಾಡುವುದು.

ಕರಿಬೇವಿನ ಎಲೆಗಳನ್ನು ಒಣಗಿಸಿ, ಅದನ್ನು ಕೊಬ್ಬರಿ ಎಣ್ಣೆಯಲ್ಲಿ ಹಸಿರು ಬಣ್ಣಕ್ಕೆ ಬರುವ ವರೆಗೂ ಕುದಿಸಬೇಕು. ನಂತರ ತಣಿಸಿ ಕೂದಲಿಗೆ ಪ್ರತಿ ವಾರಕೊಮ್ಮೆ ಹಚ್ಚುವುದರಿಂದ ಕೂದಲು ಬಿಳಿಯಾಗುವುದನ್ನು ತಡೆಯಬಹುದು.

error: Content is protected !!