ಪುಲಿಟ್ಝರ್ ಪ್ರಶಸ್ತಿ ವಿಜೇತ ಫೋಟೋ ಜರ್ನಲಿಸ್ಟ್ ದಾನಿಶ್ ಸಿದ್ದೀಕ್ ಗುಂಡಿಗೆ ಬಲಿ

July 17, 2021

ಸ್ಪಿನ್ ಬೋಲ್ಡಾಕ್ : ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತದ ಸ್ಪಿನ್ ಬೋಲ್ಡಾಕ್‍ನಲ್ಲಿ ಶುಕ್ರವಾರ ಆಫ್ಘಾನ್ ಭದ್ರತಾ ಪಡೆಗಳು ಮತ್ತು ತಾಲಿಬಾನ್ ಹೋರಾಟಗಾರರ ನಡುವಿನ ಘರ್ಷಣೆಯಲ್ಲಿ ರಾಯ್ಟರ್ಸ್‍ನ ಫೋಟೋ ಪತ್ರಕರ್ತ, ಭಾರತದ ದಾನಿಶ್ ಸಿದ್ದೀಕಿ ಅವರು ಹತ್ಯೆಗೀಡಾಗಿದ್ದಾರೆ.
ಸ್ಪಿನ್ ಬೋಲ್ಡಾಕ್‍ನ ಮುಖ್ಯ ಮಾರುಕಟ್ಟೆ ಪ್ರದೇಶವನ್ನು ಮರಳಿ ಪಡೆದುಕೊಳ್ಳಲು ಆಫ್ಘಾನ್ ವಿಶೇಷ ಪಡೆಗಳು ಹೋರಾಟ ನಡೆಸುತ್ತಿದ್ದಾಗ ಗುಂಡಿಗೆ ಸಿದ್ದೀಕಿ ಮತ್ತು ಹಿರಿಯ ಅಫ್ಘಾನಿ ಅಧಿಕಾರಿಯೋರ್ವರು ಬಲಿಯಾಗಿದ್ದಾರೆ ಎಂದು ಅಫ್ಘಾನಿಸ್ತಾನದ ಕಮಾಂಡರ್ ಓರ್ವರು ರಾಯ್ಟರ್ಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

error: Content is protected !!