4 ಸುರಂಗಗಳು ಹಾಗೂ 61 ಡ್ರೋನ್ ಗಳು ಪತ್ತೆ

July 18, 2021

ನವದೆಹಲಿ ಜು.18 : ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ 4 ಸುರಂಗಗಳು ಹಾಗೂ 61 ಡ್ರೋನ್ ಗಳು ಪತ್ತೆಯಾಗಿದೆ ಎಂದು ಬಿಎಸ್‌ಎಫ್ ಮುಖ್ಯಸ್ಥ ರಾಕೇಶ್ ಅಸ್ತಾನಾ ತಿಳಿಸಿದ್ದಾರೆ.
ಕಳೆದ ಒಂದು ವರ್ಷದಲ್ಲಿ 22 ನುಸುಳುಕೋರರನ್ನು ಹತ್ಯೆ ಮಾಡಲಾಗಿದ್ದು, 165 ಜನರನ್ನು ಗಡಿಯಲ್ಲಿ ಬಂಧಿಸಲಾಗಿದೆ. 2,786 ಕೋಟಿ ರೂ. ಮೌಲ್ಯದ 633 ಕೆಜಿ ಮಾದಕ ವಸ್ತುಗಳು, 55 ಶಸ್ತ್ರಾಸ್ತ್ರಗಳು ಮತ್ತು 4,233 ಸುತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

error: Content is protected !!