ಪಕ್ಷಕ್ಕೆ ಬನ್ನಿ ಎಂದು ಯಾರನ್ನೂ ಕರೆದಿಲ್ಲ : ಮನೆಗೆ ಬರ್ತಾರೆ ಫೋಟೋ ತೆಗಿಸ್ಕೊಂಡು ಹೋಗ್ತಾರೆ : ನಿಷ್ಠಾವಂತ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬೇಡಿ

July 20, 2021

ಮಡಿಕೇರಿ ಜು.20 : ಪಕ್ಷಕ್ಕೆ ಬನ್ನಿ ಎಂದು ನಾನು ಯಾರನ್ನೂ ಕರೆದಿಲ್ಲ, ಮನೆಗೆ ಬರ್ತಾರೆ ಫೋಟೋ ತೆಗಿಸ್ಕೊಂಡು ಹೋಗ್ತಾರೆ, ಕೊಡಗಿನ ನಿಷ್ಠಾವಂತ ಕಾರ್ಯಕರ್ತರು ಯಾರೂ ತಲೆಕೆಡಿಸಿಕೊಳ್ಳಬೇಡಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜಾತ್ಯತೀತ ಜನತಾದಳದ ವರಿಷ್ಠ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ವಿವಿಧ ಜಿಲ್ಲೆಗಳ ಜೆಡಿಎಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕೊಡಗಿಗೆ ಸಂಬAಧಪಟ್ಟAತೆ ನಾನು ಪಕ್ಷಕ್ಕೆ ಬನ್ನಿ ಎಂದು ಯಾರನ್ನೂ ಕರೆದಿಲ್ಲ, ದಿನಕ್ಕೆ 500 ಮಂದಿ ಮನೆ ಹತ್ರ ಬರ್ತಾರೆ, ಫೋಟೋ ತೆಗಿಸ್ಕೊಂಡು ಹೋಗ್ತಾರೆ. ಅಲ್ಲಿಗೆ ಹೋಗಿ ತಮ್ಮ ಅನುಕೂಲಕ್ಕೆ ತಕ್ಕಂತೆ ಹೇಳಿಕೆಗಳನ್ನು ಕೊಡ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ನ ನಿಷ್ಠಾವಂತ ಕಾರ್ಯಕರ್ತರು ಯಾರ ಎನ್ನುವುದು ನನಗೆ ಚೆನ್ನಾಗಿ ತಿಳಿದಿದೆ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸದೆ ಯಾವ ನಿರ್ಧಾರವನ್ನೂ ಕೈಗೊಳ್ಳುವುದಿಲ್ಲ. ಬಂದವರಿಗೂ ನಾನು ಇದನ್ನೇ ಹೇಳಿದ್ದೇನೆ, ನನ್ನ ಮಾತು ಅಂತಿಮವಲ್ಲ, ಕಾರ್ಯಕರ್ತರನ್ನು ಕೇಳಿಯೇ ಮುಂದಿನ ನಿರ್ಧಾರ ಎನ್ನುವುದನ್ನು ಸ್ಪಷ್ಟವಾಗಿ ಹೇಳಿದ್ದೇನೆ ಎಂದರು.
ಈ ರೀತಿಯ ಗೊಂದಲಗಳಿಗೆ ತಲೆ ಕೆಡಿಸಿಕೊಳ್ಳದೆ ಮುಂಬರುವ ಜಿ.ಪಂ ಹಾಗೂ ತಾ.ಪಂ ಚುನಾವಣೆಗೆ ಪಕ್ಷ ಸಂಘಟನೆ ಮಾಡುವಂತೆ ಕುಮಾರಸ್ವಾಮಿ ಕರೆ ನೀಡಿದರು.
ಸಭೆಯಲ್ಲಿ ಕೊಡಗಿನ ಮುಖಂಡರು ಪಾಲ್ಗೊಂಡಿದ್ದರು.
ಕಾಂಗ್ರೆಸ್ ಪಕ್ಷದ ಕೊಡಗಿನ ಪ್ರಮುಖರು ಜೆಡಿಎಸ್ ಗೆ ಸೇರ್ಪಡೆಗೊಳ್ಳುವ ಕುರಿತು ಇತ್ತೀಚೆಗೆ ಚರ್ಚೆಗಳು ನಡೆದಿತ್ತು. ಅಲ್ಲದೆ ಈ ಬಗ್ಗೆ ಜೆಡಿಎಸ್ ನೊಳಗೆ ಅಪಸ್ವರ ಕೇಳಿ ಬಂದಿತ್ತು.

ಕುಮಾರಸ್ವಾಮಿ ಅವರ ಇಂದಿನ ಹೇಳಿಕೆ ಕೊಡಗು ಜೆಡಿಎಸ್ ಪ್ರಮುಖರಿಗೆ ಕೊಂಚ ನೆಮ್ಮದಿ ತಂದಿದ್ದರೂ ತಳಮಳ ಕಾಡುತ್ತಿದೆ.

error: Content is protected !!