ಪೇರಡ್ಕ- ಗೂನಡ್ಕದಲ್ಲಿ ಬಕ್ರೀದ್ ಆಚರಣೆ

July 21, 2021

ಮಡಿಕೇರಿ ಜು. 21 : ಪೇರಡ್ಕ ಗೂನಡ್ಕ ದಲ್ಲಿ ತ್ಯಾಗ, ಬಲಿದಾನದ ಬಕ್ರೀದ್ ಹಬ್ಬ ವನ್ನು ಕೋವಿಡ್ ಹಿನ್ನೆಲೆ ಸರ್ಕಾರದ ಮಾರ್ಗಸೂಚಿಯಂತೆ ಸರಳವಾಗಿ ಆಚರಿಸಲಾಯಿತು.

ಮಸೀದಿಯಲ್ಲಿ ಮುಸಲ್ಮಾನ ಬಾಂಧವರು ಸಮಾಜಿಕ ಅಂತರ ಕಾಪಾಡಿಕೊಂಡು ಜಮಾಜ್ ಸಲ್ಲಿಸಿದರು. ಜಗತ್ತಿನಲ್ಲಿ ಎಲ್ಲಕ್ಕಿಂತಲೂ ಮಾನವನ ಜೀವ ಅತ್ಯಂತ ಅಮೂಲ್ಯವಾದದ್ದು ಎಂಬ ಸಂದೇಶವನ್ನು ಇಸ್ಲಾಂ ಸಾರಿದೆ. ಸಹೋದರ ಧರ್ಮಿಯರ ಜೊತೆಗೂ ಬಕ್ರೀದ್ ಖುಷಿಯನ್ನು ಹಂಚಿಕೊಂಡು ಸಾಮರಸ್ಯವನ್ನು ಗಟ್ಟಿಗೊಳಿಸಲು ಪಣ ತೊಡಬೇಕಿದೆ. ಕೋವಿಡ್ ಲಾಕ್‍ಡೌನ್‍ನಿಂದ ಕಲಿತ ಪಾಠ ಮುಂದಿನ ಜೀವನಕ್ಕೆ ದಾರಿದೀಪವಾಗಲಿ ಎಂದು ಪ್ರಾರ್ಥಿಸಿದರು.

ಉಸ್ತಾದ್ ರಿಯಾಝ್ ಪೈಝಿ ನೂರುದ್ದಿನ್, ಅನ್ಸಾರಿ, ಟಿ.ಯಂ. ಶಹೀದ್ ತೆಕ್ಕೀಲ್, ಜಿ.ಕೆ. ಹಮೀದ್ ಗೂನಡ್ಕ, ಆಲಿ ಹಾಜಿ, ರಝಾಕ್ ಮೊಟ್ಟೆಂಗಾರ್, ಇಬ್ರಾಹಿಂ, ಮೇಟ್ರೂ ಹನೀಪ್, ಟಿ.ಬಿ. ಮುನೀರ್ ದಾರಿಮಿ, ಸಾಜಿದ್ ಅಝ್ಹರಿ, ತಾಜು ಕಾದರ್ ಮೊಟ್ಟೆಂಗಾರ್ , ಹಕೀಂಪೇರಡ್ಕ, ಪಿ.ಕೆ. ಉಮ್ಮರ್ ಗೂನಡ್ಕ, ರಝಾಖ್ ಹಾಜಿ ಅಡಿಮರಡ್ಕ, ಮತ್ತಿತರರು ಪಾಲ್ಗೊಂಡಿದ್ದರು.error: Content is protected !!