ಕುಂದಚೇರಿ ಚೆಟ್ಟಿಮಾನಿಯಲ್ಲಿ ಕೊರೊನಾ ವಾರಿಯರ್ಸ್‍ಗೆ ದಿನಸಿ ಕಿಟ್ ವಿತರಣೆ

July 21, 2021

ಮಡಿಕೇರಿ ಜು. 21 : ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಕೊರೊನಾ ವಾರಿಯರ್ಸ್ ಗಳಾಗಿ ಕಾರ್ಯನಿರ್ವಹಿಸಿದ ಕುಂದಚೇರಿ ಚೆಟ್ಟಿಮಾನಿ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಕೆ. ಪಿ. ಸಿ. ಸಿ ವಕ್ತಾರ, ಹಿರಿಯ ವಕೀಲ ಎ. ಎಸ್. ಪೊನ್ನಣ್ಣ ದಿನಸಿ ಕಿಟ್ ವಿತರಿಸಿದರು.

ಕುಂದಚೇರಿ ಚೆಟ್ಟಿಮಾನಿ ಸಮುದಾಯ ಭವದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ 50 ಆಹಾರ ಕಿಟ್ ಗಳನ್ನು ವಿತರಿಸಿದರು.

ಕೆದಂಬಾಡಿ ಹರೀಶ್ ಅವರ ಅಧ್ಯಕ್ಷತೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಲಾಕ್ ಅಧ್ಯಕ್ಷ ಕೆ. ಎ. ಇಸ್ಮಾಯಿಲ್, ಕುಂದಚೇರಿ ಗ್ರಾ.ಪಂ ಅಧ್ಯಕ್ಷ ಸವಿತಾ ಉದಯಕುಮಾರ್, ಪಂಚಾಯ್ತಿ ಉಪಾಧ್ಯಕ್ಷ ವಿಶು ಪ್ರವೀಣ್ ಕುಮಾರ್, ಬೇಕಲ್ ರಾಮನಾಥ್ , ಬಾಲಚಂದ್ರ ನಾಯಕ್ ಕರಿಕೆ, ಸೂರಜ್ ಹೊಸೂರು,ಕೇದಂಬಾಡಿ ರಘು ನಾಥ್, ಕೇದಂಬಾಡಿ ಸುರೇಂದ್ರ ಮಸೀದಿಯ ಅಧ್ಯಕ್ಷ ತಮಿಮು, ಶಿವಕುಮಾರ್ ಮುಂದೋಡಿ,ಸೆಟ್ಟೆಜನ ಚೆಟ್ಟಿಯಪ್ಪ ಹಾಗೂ ಹಲವಾರು ಕಾರ್ಯಕರ್ತರು ಹಾಜರಿದ್ದರು.

ಆರಂಭದಲ್ಲಿ ಕುಂದಚೇರಿ ಗ್ರಾ.ಪಂ ಸದಸ್ಯ ಹಾರೀಶ್ ಸರ್ವರನ್ನು ಸ್ವಾಗತಿಸಿದರು.

error: Content is protected !!