ಹೃದಯಾಘಾತದಿಂದ ಕಾಡಾನೆ ಸಾವು

July 21, 2021

ಮಡಿಕೇರಿ ಜು.21 : ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಗೋಣಿಕೊಪ್ಪ ಸಮೀಪದ ಧನುಗಾಲ ಗ್ರಾಮದಲ್ಲಿ ನಡೆದಿದೆ.
ಮಾಯಮುಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಧನುಗಾಲದ ಬಸಪ್ಪ ರಸ್ತೆಯ ಸಮೀಪದ ತೋಟವೊಂದರಲ್ಲಿ ಅಂದಾಜು 18ರಿಂದ 22 ವಯಸ್ಸಿನ ಗಂಡಾನೆ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ರಾತ್ರಿಯಿಂದ ಘೀಳಿಡುತ್ತಿದ್ದ ಕಾಡಾನೆಯ ಮೈಮೇಲೆ ಯಾವುದೇ ಗಾಯ ಅಥವಾ ಇನ್ನಿತರ ಕುರುಹುಗಳು ಕಾಣುತ್ತಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸ್ಥಳಕ್ಕೆ ಪೊನ್ನಂಪೇಟೆ, ತಿತಿಮತಿ ವಲಯ ಅರಣ್ಯಾಧಿಕಾರಿಗಳಾದ ರಾಮಪ್ಪ, ಕಿರಣ್ ಕುಮಾರ್ ಭೇಟಿ ನೀಡಿ ಮಹಜರು ನಡೆಸಿದ್ದಾರೆ.
ಪಶುವೈದ್ಯಾಧಿಕಾರಿ ಡಾ. ಚಿಟ್ಟಿಯಪ್ಪ ಮೃತ ಕಾಡಾನೆಯ ಮರಣೋತ್ತರ ಪರೀಕ್ಷೆ ನಡೆಸಿದರು.

error: Content is protected !!