ಪೊನ್ನಂಪೇಟೆಯ ಸಿಐಟಿ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಕಾರ್ಯಾಗಾರ

July 22, 2021

ಮಡಿಕೇರಿ ಜು.22 : ಪೊನ್ನಂಪೇಟೆ, ಹಳ್ಳಿಗಟ್ಟುವಿನ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ “ಕಂಪ್ಯೂಟರ್ ಸೈನ್ಸ್ ಆಂಡ್ ಇಂಜನಿಯರಿಂಗ್ ವಿಭಾಗದ ವತಿಯಿಂದ 6 ದಿನಗಳ ಕಾಲ ರಾಷ್ಟ್ರ ಮಟ್ಟದ ಕಾರ್ಯಾಗಾರವನ್ನು” ಆಯೋಜಿಸಲಾಗಿದ್ದು, ಕಾರ್ಯಾಗಾರಕ್ಕೆ ಕೊಡವ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಸಿ.ಪಿ.ಬೆಳ್ಳಿಯಪ್ಪ ಚಾಲನೆ ನೀಡಿದರು.

ಈ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಬೆಳಗಾವಿಯ Techgenie’s Solutions ನ ಶ್ರೀ ಸುಮಿತ್ ಹಂಜೆ ರವರು “smart farming using IOT- a bird eye view” ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಉಪಯುಕ್ತ ಮಾಹಿತಿಯನ್ನು ನೀಡಿದರು.

ಈ ಕಾರ್ಯಾಗಾರದಲ್ಲಿ ಹಲವಾರು ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಉತ್ತಮ ಪ್ರತಿಕ್ರಿಯೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಸಿ.ಐ.ಟಿ.ಯ ಪ್ರಾಂಶುಪಾಲರಾದ ಡಾ.ಎಂ .ಬಸವರಾಜು ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಪಿ.ಸಿ.ಕವಿತ, ಹಾಗೂ ವಿಭಾಗ ಪ್ರಾಧ್ಯಾಪಕ ವೃಂದ ಮತ್ತು ತಾಂತ್ರಿಕ ಸಿಬ್ಬಂದಿ ವೃಂದದವರು ಹಾಗೂ ವಿದ್ಯಾರ್ಥಿವೃಂದದವರು ಹಾಗೂ ರಾಜ್ಯದ ಇತರ ಹಲವಾರು ತಾಂತ್ರಿಕ ಕಾಲೇಜಿನ ಪ್ರಾಧ್ಯಾಪಕ ವೃಂದ ಮತ್ತು ವಿದ್ಯಾರ್ಥಿವೃಂದದವರು ಪಾಲ್ಗೊಂಡಿದ್ದರು.

ಆಸಕ್ತರು ಈ ಕಾರ್ಯಾಗಾರದ ಸಂಪೂರ್ಣ ಮಾಹಿತಿಯನ್ನು CIT website ನಲ್ಲಿ ಪಡೆಯಬಹುದಾಗಿದೆ. ಹಾಗೆಯೇ ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದೆ.

error: Content is protected !!