ಕೊಯಿನಾಡು ಬಳಿ ಬಸ್ ಅಪಘಾತ : ನಾಲ್ವರಿಗೆ ಗಾಯ

27/07/2021

ಮಡಿಕೇರಿ ಜು.27 : ರಾಜ್ಯ ಸಾರಿಗೆ ಸಂಸ್ಥೆ ಬಸ್ ಅಪಘಾತವಾಗಿ ನಾಲ್ವರು ಗಾಯಗೊಂಡಿರುವ ಘಟನೆ ಕೊಯಿನಾಡು ಬಳಿ ನಡೆದಿದೆ.
ಮಡಿಕೇರಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬಸ್ ಎದುರು ಭಾಗದಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ರಸ್ತೆ ಬದಿಯ ಚರಂಡಿಗೆ ವಾಲಿದೆ. ಮಧ್ಯ ರಾತ್ರಿ 2 ಗಂಟೆ ವೇಳೆ ಈ ಘಟನೆ ನಡೆದಿದ್ದು, ಭಾರೀ ಮಳೆಯಿದ್ದ ಕಾರಣ ಬಸ್ ಚಾಲಕನಿಗೆ ಲಾರಿ ಕಾಣಿಸಲಿಲ್ಲ ಎಂದು ಹೇಳಲಾಗಿದೆ.
ಕೊಯಿನಾಡು ನಿವಾಸಿಗಳು ಹಾಗೂ ಪೊಲೀಸರು ನಾಲ್ವರು ಗಾಯಾಳುಗಳನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.