ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ಗೊರವನಹಳ್ಳಿ ಮಹಾಲಕ್ಷ್ಮೀ

28/07/2021

ಐತಿಹಾಸಿಕ ಪ್ರವಾಸಿ ತಾಣವಾದ ಗೊರವನಹಳ್ಳಿ ಮಹಾಲಕ್ಷ್ಮಿ ಸನ್ನಿಧಾನ ಲಕ್ಷ್ಮಿಗೆ ಮೀಸಲಾದ ಕರ್ನಾಟಕದ ಏಕೈಕ ಧಾರ್ಮಿಕ ಕ್ಷೇತ್ರ ಎಂಬ ಹಿರಿಮೆಗೆ ಪಾತ್ರವಾಗಿದೆ.

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಮಹಾಲಕ್ಷ್ಮಿದೇವಿಯ ಸನ್ನಿಧಾನಕ್ಕೆ ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತಾಧಿಗಳು ಆಗಮಿಸುತ್ತಾರೆ.

ಮಹಾಲಕ್ಷ್ಮಿ ಉದ್ಭವ ಪ್ರದೇಶ: ಅರಸು ವಂಶಸ್ಥರಾದ ಅಬ್ಬಯ್ಯರ ಕುಟುಂಬ ಹಿರೇಗುಂಡಗಲ್‌ನಿಂದ ನರಸಯ್ಯನಪಾಳ್ಯಕ್ಕೆಬಂದು ನೆಲೆಸಿದ ನಂತರ ಅಬ್ಬಯ್ಯ ಅರಸನಿಗೆ ಕೆರೆಯ ನೀರಿನಲ್ಲಿ ದೊರೆತ ಲಕ್ಷ್ಮಿರೂಪವಿರುವ ಶಿಲೆಯನ್ನು ಅರಸ ಮನೆಗೆ ತಂದು ನಿತ್ಯ ಪೂಜೆ ಮಾಡಿದ ಸ್ಥಳವೇ ಇಂದು ಗೊರವನಹಳ್ಳಿ ಯಾತ್ರಸ್ಥಳವಾಗಿದೆ. ಇಂದಿಗೂ ನರಸಯ್ಯನಪಾಳ್ಯ ಊರಿನಲ್ಲಿ ಕೆರೆಯಿದ್ದು, ಈಗಲೂ ಅದು ಅಬ್ಬಯ್ಯನ ಕೆರೆಯೆಂದು ಪ್ರಸಿದ್ಧಿಯಾಗಿದೆ.

ಗೊರವನಹಳ್ಳಿಯ ಯಾತ್ರ ಸ್ಥಳಗಳು: ಮಹಾಲಕ್ಷ್ಮಿ ತಾಯಿಯ ಎಡಭಾಗದಲ್ಲಿ ಮಂಚಾಲ ನಾಗಪ್ಪ, ಈಗ ಹುತ್ತ ಬೆಳೆದಿದೆ. ಹಿಂಭಾಗದಲ್ಲಿ ಆದಿಶಕ್ತಿ, ದೇವಾಲಯ ಬಲಭಾಗದಲ್ಲಿ ತೀತಾ ಜಲಾಶಯ ಮತ್ತು ಲಕ್ಷ್ಮಿ ಮೂಡಿಬಂದ ಅಬ್ಬಯ್ಯನ ಕೆರೆ ಇದೆ. ದಕ್ಷಿಣ ಒಣಿನಾಗನ ಶಿಲೆ ಮತ್ತು ಸಮೀಪದಲ್ಲಿ ಲಕ್ಷ್ಮಿದೇವಿಯ ಕಮಲ ಪಾದವಿದೆ. ಹುಣಸೆಮರದ ಗಣಪತಿ ಶಿಲೆ. ದೇವಾಲಯದ ಎಡಭಾಗದಲ್ಲಿ ಕಲಿಯುಗದ ದೇವತೆ ಕಮಲಮ್ಮ ಅಜ್ಜಿಯ ಬೃಂದಾವನವಿದೆ.