ಸೋಮವಾರಪೇಟೆ ತಾಲ್ಲೂಕು ಬಿಜೆಪಿ ತೀವ್ರ ಅಸಮಾಧಾನ

29/07/2021

ಸೋಮವಾರಪೇಟೆ ಜು.29 : ಕುಶಾಲನಗರ ಮಡಿಕೇರಿ ರಸ್ತೆಯ ಸ್ಯಾಂಡಲ್ ಕಾಡ್ ಬಳಿ ಕಳೆದ ಭಾನುವಾರ ಅಪಘಾತ ನಡೆದ ಸಂದರ್ಭ ಸೈನಿಕ ಕುಟುಂಬದವರ ಮೇಲಿನ ಗಂಪು ಹಲ್ಲೆ ಖಂಡನೀಯ ಎಂದು ತಾಲೂಕು ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ.
ಯೋಧರ ನಾಡಿನಲ್ಲಿ ಯೋಧರ ಮೇಲಿನ ಹಲ್ಲೇ ಅಮಾನುಷ ಕೃತ್ಯ. ಅಪಘಾತದ ನೆಪದಲ್ಲಿ 20 ಮಂದಿಯ ತಂಡ ಹಲ್ಲೆ ಮಾಡಿದೆ. ಎಲ್ಲಾ ಆರೋಪಿಗಳನ್ನು ಕೂಡಲೆ ಬಂಧಿಸಬೇಕು. ಕೃತ್ಯದ ಹಿಂದೆ ಇರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕಾನುನು ಕ್ರಮ ಜರುಗಿಸಬೇಕು ಎಂದು ಪಕ್ಷದ ಜಿಲ್ಲಾ ಸಹ ವಕ್ತಾರ ಬಿ.ಜೆ.ದೀಪಕ್ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ರಾಜಕೀಯ ಪಕ್ಷವೊಂದರ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಕೃತ್ಯದಲ್ಲಿ ಭಾಗಿಯಾದ ಆರೋಪವಿದ್ದು, ಕೂಡಲೆ ಅವರ ಸ್ಥಾನದಿಂದ ಉಚ್ಚಾಟಿಸಬೇಕು. ಪಕ್ಷದ ತಾಲೂಕು ವಕ್ತಾರ ಎಸ್.ಎನ್.ರಘು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಶಾಂತಿ ಕದಡುವ ಹುನ್ನಾರ ನಡೆಯುತ್ತಿದ್ದು, ಇಂತಹ ಷಂಡ್ಯತರದ ಹಿಂದಿರುವ ಕಾಣದ ಕೈಗಳನ್ನು ಪತ್ತೆಹಚ್ಚುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕು. ಇಂತಹ ಪ್ರಕರಣಗಳನ್ನು ಪಕ್ಷಾತೀತವಾಗಿ ಖಂಡಿಸಬೇಕು. ಆದರೆ ಕಾಂಗ್ರೆಸ್ ಪಕ್ಷದ ಕುಶಾಲನಗರ ವಿಭಾಗದ ಕೆಲ ನಾಯಕರು ಹಲ್ಲೆಕೋರರ ಪರವಾಗಿ ನಿಂತಿರುವುದು ಖಂಡನೀಯ ಎಂದು ಹೇಳಿದರು.
ಗೋಷ್ಠಿಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಪಿ.ಕೆ.ಚಂದ್ರು, ಬಿ.ಆರ್.ಮಹೇಶ್ ಇದ್ದರು.