60 ಮಂಗಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ರಸ್ತೆ ಬದಿ ಎಸೆದ ದುಷ್ಕರ್ಮಿಗಳು : ರಕ್ಷಿಸಲ್ಪಟ್ಟಿದ್ದು ಕೇವಲ… !

29/07/2021

ಸುಮಾರು 60 ಮಂಗಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ !

ಹಾಸನ ಜು.29 : ಸುಮಾರು 60 ಮಂಗಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ರಸ್ತೆ ಬದಿ ಎಸೆದ ಅಮಾನವೀಯ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದ ಬೇಗೂರು ಕ್ರಾಸ್ ನಲ್ಲಿ ನಡೆದಿದೆ.
ದಾರಿ ಹೋಕರು ಇದನ್ನು ಗಮನಿಸಿದ್ದು, ವಿಷ ಆಹಾರದಿಂದ ಮಂಗಗಳು ಅಸ್ವಸ್ಥಗೊಂಡಿರುವುದು ಕಂಡು ಬಂತು. ತಕ್ಷಣ ರಕ್ಷಿಸಲು ಯತ್ನಿಸಲಾಯಿತ್ತಾದರೂ ಕೇವಲ 14 ಮಂಗಗಳ ಜೀವ ಮಾತ್ರ ಉಳಿಯಿತು. ಉಳಿದ ಮಂಗಗಳು ಮೃತಪಟ್ಟಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.