ಕಾಜೂರು, ಯಡವಾರೆ, ಸಜ್ಜಳ್ಳಿ ಗ್ರಾಮಗಳಲ್ಲಿ ಕಾಡಾನೆ ಸವಾರಿ

30/07/2021

ಸೋಮವಾರಪೇಟೆ ಜು.30 : ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು, ಯಡವಾರೆ, ಸಜ್ಜಳ್ಳಿ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದ ಹಿನ್ನೆಲೆಯಲ್ಲಿ ಡಿಎಫ್‌ಒ ಎ.ಸಿ. ಪೂವಯ್ಯ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಮೀಸಲು ಅರಣ್ಯ ವ್ಯಾಪ್ತಿಯಲ್ಲಿನ ಸೋಲಾರ್ ತಂತಿಬೇಲಿ, ಆನೆ ಕಂದಕಗಳನ್ನು ಪರಿಶೀಲಿಸಿದರು. ರೈಲ್ವೆ ಬ್ಯಾರಿಕೇಡ್ ಹಾಗು ಕೆಲವು ಕಡೆ ತಡೆಗೋಡೆಗಳನ್ನು ನಿರ್ಮಿಸುವಂತೆ ಮಚ್ಚಂಡ ಆಶೋಕ್, ಎಸ್.ಎನ್.ಯೋಗೇಶ್, ಬಾರನ ಭರತ್ ಮತ್ತಿತರರು ಮನವಿ ಮಾಡಿದರು. ಕಾಡಾನೆಗಳ ನಿಯಂತ್ರಣಕ್ಕೆ ಇಲಾಖೆ ಕೈಗೊಳ್ಳಬೇಕಾಗಿರುವ ಕಾಮಗಾರಿಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಡಿಎಫ್‌ಒ ತಿಳಿಸಿದರು. ಕಾಡಾನೆಗಳ ದಾಳಿಯಿಂದ ಬೆಳೆಹಾನಿ ಪರಿಹಾರವನ್ನು ಸೂಕ್ತ ಸಮಯದಲ್ಲಿ ಬಿಡುಗಡೆಯಾಗಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮಸ್ಥರಾದ ನಂಗಾರು ರಾಮಚಂದ್ರ, ಹರೀಶ್, ಬಾರನ ಪ್ರಮೋದ್, ಎಂ.ಎಸ್. ಜಯಕುಮಾರ್, ಡಿ.ಪಿ. ಕೃಷ್ಣಪ್ಪ, ಆರ್‌ಎಫ್‌ಒ ಶಮ, ಡಿಆರ್‌ಎಫ್‌ಒ ಜಗದೀಶ್ ಇದ್ದರು.