ಮಡಿಕೇರಿ : ಸಾಮಾನ್ಯ ಕಾರ್ಯಕರ್ತನಿಗೂ ಅಧಿಕಾರ ನೀಡುವ ಶಕ್ತಿ ಇರುವುದು ಬಿಜೆಪಿಗೆ

30/07/2021

ಮಡಿಕೇರಿ ಜು.30 : ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಪ್ರಥಮ ಕಾರ್ಯಕಾರಣಿ ಸಭೆ ಮಡಿಕೇರಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ನಡೆಯಿತು.
ಸಭೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಅವರು ಮಾತನಾಡಿ, ‘ಕೋವಿಡ್ ಸೊಂಕಿನಿಂದ ಮೃತ ಪಟ್ಟ ಎಷ್ಟೋ ಜನರ ಸಂಸ್ಕಾರವನ್ನು ನೆರವೇರಿಸಿ, ಮಾನವೀಯತೆ ಮೆರೆದ ಜಿಲ್ಲಾ ಯುವ ಮೋರ್ಚಾವನ್ನು ಅಭಿನಂದಿಸಿದರು. ಪಕ್ಷಕ್ಕಾಗಿ ಹಿರಿಯರು ನೀಡಿದ ಕೊಡುಗೆ, ಜಿಲ್ಲೆಯಲ್ಲಿ ಬಿಜೆಪಿ ಬೆಳೆದು ಬಂದ ದಿನಗಳನ್ನು ಮೆಲುಕು ಹಾಕಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ದರ್ಶನ್ ಜೋಯಪ್ಪ ಅವರು,’ಇನ್ನು ಮುಂದಕ್ಕೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಆಶಯ ವ್ಯಕ್ತ ಪಡಿಸಿದರು. ಕಳೆದ ಒಂದು ವರ್ಷದಿಂದ ನಡೆಸಿದ ಕಾರ್ಯಕ್ರಮಗಳ ಕುರಿತು ಚುಟುಕಾಗಿ ವಿವರಿಸಿದ ಅವರು,  ಮುಂದಿನ ದಿನಗಳಲ್ಲಿ ಇನ್ನೂ ವಿನೂತನ ಕಾರ್ಯಕ್ರಮಗಳನ್ನು  ಆಯೋಜಿಸುವ ಮೂಲಕ ಮನೆ ಮಾತಾಗಬೇಕು ಎಂದರು. 
ಜಿಲ್ಲಾ ಯುವ ಮೋರ್ಚಾದ ಕೊಡಗು ಪ್ರಭಾರ ಹಾಗು ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ಜಯಶಂಕರ್ ಅವರು, ‘ಒಬ್ಬ ಸಾಮಾನ್ಯ ಕಾರ್ಯಕರ್ತನೂ ಪಕ್ಷಕ್ಕಾಗಿ ಶ್ರಮವಹಿಸಿ ದುಡಿದರೆ, ಅವನಿಗೆ ಉತ್ತಮ ಜವಾಬ್ದಾರಿಯುತ ಸ್ಥಾನ ನೀಡುವ ಮುಕ್ತ ವಾತಾವರಣ ಕೇವಲ ಭಾರತೀಯ ಜನತಾ ಪಾರ್ಟಿಯಲ್ಲಿ ಮಾತ್ರವೇ ಇದೆ. ಹಾಗಾಗಿ ನೀವು ಕೂಡ ನಿಗಾ ವಹಿಸಿ ಪಕ್ಷದ ಏಳಿಗೆಗೆ ಫಲಾಪೇಕ್ಷೆಗಳಿಟ್ಟುಕೊಳ್ಳದೆ ಕೆಲಸ ಮಾಡಿದರೆ ಪಕ್ಷ ನಿಮ್ಮನ್ನು ಖಂಡಿತವಾಗಿ ಗುರುತಿಸುತ್ತದೆ. ಹಾಗಾಗಿ ಪಕ್ಷದ ಬಲವರ್ಧನೆಗೆ ಯುವ ಜನರಾದ ನೀವು ಶಕ್ತಿ ಮೀರಿ ದುಡಿಯಬೇಕು’ ಎಂದು ಕರೆ ನೀಡಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ರಾಬಿನ್ ದೇವಯ್ಯ ಅವರು ಮಾತನಾಡಿ, ‘ಪಕ್ಷದಲ್ಲಿ ಪ್ರತಿ ಕಾರ್ಯಕರ್ತನೂ ಪಡುವ ಶ್ರಮವನ್ನೂ ಪಕ್ಷ ಗಮನದಲ್ಲಿಡುತ್ತದೆ. ಪಕ್ಷದಲ್ಲಿ ಸಣ್ಣ ಪುಟ್ಟ ಜವಾಬ್ದಾರಿಗಳನ್ನು ಆಸಕ್ತಿಯಿಂದ ಮಾಡಿ ಪ್ರತಿಫಲ ಬಯಸದೆ ಕೆಲಸ ನಿರ್ವಹಿಸಬೇಕು. ಹಾಗೆ ತಳ ಮಟ್ಟದಿಂದ ಬೆಳೆಯುತ್ತಾ, ವ್ಯಕ್ತಿ ನಿಷ್ಠೆ, ಪಕ್ಷ ನಿಷ್ಠೆ, ದೇಶ ನಿಷ್ಠೆ, ಧ್ಯೇಯ ನಿಷ್ಠೆಯನ್ನು ಕಾಪಾಡಿಕೊಳ್ಳಬೇಕು.  

ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ದರ್ಶನ್ ಜೋಯಪ್ಪ ಅವರು ವಹಿಸಿದ್ದರು.
ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರಾದ ಜಯಶಂಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾದಪ್ಪ, ರವಿ ಕಾಳಪ್ಪ ದಕ್ಷಿಣ ಕನ್ನಡ ಜಿಲ್ಲೆಯ  ಪ್ರಭಾರಿಗಳಾದ ಭಾರತೀಶ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಪ್ರಸಾದ್ ಚೆಂಗಪ್ಪ, ಯಶ್ವಿನ್ ಅವರುಗಳು ಅತಿಥಿಗಳಾಗಿ ವೇದಿಕೆ ಮೇಲೆ ಆಸೀನರಾಗಿದ್ದರು. ಉಳಿದಂತೆ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪದಾಧಿಕಾರಿಗಳು,ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ಕಾರ್ಯಕಾರಿಣಿ ಸಭೆಯಲ್ಲಿ ಹಾಜರಿದ್ದರು.