ಮೇಕೇರಿ : ಅಪರಿಚಿತ ಮಹಿಳೆಯೊಂದಿಗೆ ಬಂದು ಪತ್ನಿಯೊಂದಿಗೆ ಕಲಹ : ಪೊಲೀಸರಿಂದ ಕ್ರಮ

31/07/2021

ಮಡಿಕೇರಿ ಜು.31 : ಕುಡಿದ ಅಮಲಿನಲ್ಲಿ ಅಪರಿಚಿತ ಮಹಿಳೆಯನ್ನು ಮನೆಗೆ ಕರೆದುಕೊಂಡು ಬಂದ ವ್ಯಕ್ತಿಯೊಬ್ಬ ಪತ್ನಿಯೊಂದಿಗೆ ಕಲಹ ತೆಗೆದು ಪೊಲೀಸರಿಂದ ಬುದ್ಧಿ ಹೇಳಿಸಿಕೊಂಡ ಪ್ರಸಂಗ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮೇಕೇರಿ ಗ್ರಾಮದ ಸುಭಾಷ್ ನಗರ ಬಡಾವಣೆಯಲ್ಲಿ ನಡೆದಿದೆ.
ಅಪರಿಚಿತ ಮಹಿಳೆ ಎದುರು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಕಾರಣ ಪೊಲೀಸ್ ತುರ್ತು ಸೇವಾ ಸಂಖ್ಯೆ 112 ಗೆ ಕರೆ ಮಾಡಲಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರು ಅಪರಿಚಿತ ಮಹಿಳೆಯನ್ನು ಕಳುಹಿಸಿ ವ್ಯಕ್ತಿಗೆ ಬುದ್ಧಿ ಹೇಳಿ ಎಚ್ಚರಿಕೆ ನೀಡಿದರು.