ಮಡಿಕೇರಿಗೊಂದು ಆರ್ಟ್ ಗ್ಯಾಲರಿ ಬೇಕು : ನನಗೊಂದು ಹಕ್ಕುಪತ್ರ ನೀಡಿ

31/07/2021

ಮಡಿಕೇರಿ ಜು.31 : ಚಿತ್ರ ಕಲಾವಿದರನ್ನು ಪ್ರೋತ್ಸಾಹಿಸಲು ಸರ್ಕಾರವೇ ಆರ್ಟ್ ಗ್ಯಾಲರಿಯೊಂದನ್ನು ಸ್ಥಾಪಿಸಬೇಕು ಮತ್ತು ಪ್ರಯೋಗಾತ್ಮಕವಾಗಿ ನಾನೇ ಆರಂಭಿಸಿರುವ ಪುಟ್ಟದೊಂದು ಆರ್ಟ್ ಗ್ಯಾಲರಿಗೆ ಜಿಲ್ಲಾಡಳಿತ ಹಕ್ಕುಪತ್ರ ನೀಡಬೇಕೆಂದು ಚಿತ್ರ ಕಲಾವಿದ ಆರ್.ಸಂದೀಪ್ ಕುಮಾರ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2014ರಲ್ಲಿ “ಸಂದೀಪ್ ಮಡಿಕೇರಿ ಫೈನ್ ಆರ್ಟ್ ಟ್ರಸ್ಟ್” ಸ್ಥಾಪಿಸಿ, ಆ ಮೂಲಕ ಉದ್ಯೋಗಾವಕಾಶ ಕಲ್ಪಿಸಿಕೊಂಡು ಬದುಕು ಸಾಗಿಸುತ್ತಿದ್ದೇನೆ. ಯುವ ಕಲಾವಿದರನ್ನು ಪ್ರೋತ್ಸಾಹಿಸಲು ಸಣ್ಣದೊಂದು ಆರ್ಟ್ ಗ್ಯಾಲರಿಯನ್ನೂ ಆರಂಭಿಸಿದ್ದೇನೆ. ಇದನ್ನು ಸಹಿಸದ ಕೆಲವು ವ್ಯಕ್ತಿಗಳು ಗ್ಯಾಲರಿಯನ್ನು ತೆರವುಗೊಳಿಸಲು ಮುಂದಾಗಿದ್ದು, ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಒಂದು ವೇಳೆ ಕಿರುಕುಳ ಮುಂದುವರೆದರೆ ಮತ್ತು ಗ್ಯಾಲರಿಗೆ ಮೂಲಭೂತ ಸೌಲಭ್ಯ ನೀಡದಿದ್ದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.