ಕೊಡಗಿನ ಕಾವ್ಯಗೆ ಒಲಿದ ಮಿಸೆಸ್ ಸೌತ್ ಇಂಡಿಯನ್ ಕಿರೀಟ

01/08/2021

ಮಡಿಕೇರಿ ಆ.1 : ನಂದಿನಿ ಕ್ರಿಯೇಷನ್ಸ್ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸೌಂದರ್ಯ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ಕೊಡಗಿನ ನೆಲ್ಲೀರ ಕಾವ್ಯ ಅವರು ಮಿಸೆಸ್ ಸೌತ್ ಇಂಡಿಯನ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ದಕ್ಷಿಣ ಕೊಡಗಿನ  ಬಾಳಾಜಿ ಗ್ರಾಮದ ನೆಲ್ಲೀರ ದೇವಯ್ಯ,  ಸುಜು, ದಂಪತಿಗಳ ಪುತ್ರಿ ನೆಲ್ಲೀರ ಕಾವ್ಯ ಅವರು, ಬೆಂಗಳೂರಿನ ಶೆರಾಟನ್ ಹೋಟೆಲ್‌ನಲ್ಲಿ ಆಯೋಜಿಸಿದ್ದ ಅಂತಿಮ ಹಣಾಹಣಿಯಲ್ಲಿ 20 ಸ್ಪರ್ಧಿಗಳನ್ನು ಹಿಂದಿಕ್ಕಿ  ಗೆಲುವನ್ನು ಸಾಧಿಸಿದರು.

ಇದರೊಂದಿಗೆ ಬೆಸ್ಟ್ ಆಟಿಟ್ಯೂಡ್ ಸ್ಥಾನ ಕೂಡಾ ಪಡೆದುಕೊಂಡರು. ಪ್ರತಿಭಾನ್ವೇಷಣೆ, ವೇಸ್ಟೆರನ್, ಕಲೆ, ಕ್ಯಾಟ್ ವಾಕ್, ಪ್ರಶ್ನೋತ್ತರ, ಸೀರೆ ಉಡಿಗೆ ಸ್ಪರ್ಧೆಗಳಲ್ಲಿ ನೀಡಿದ ಉತ್ತಮ ಪ್ರದರ್ಶನ ಮಿಸಸ್ ಸೌತ್ ಇಂಡಿಯನ್ ವಿನ್ನರ್ ಪ್ರಶಸ್ತಿ ಪಡೆಯಲು ಕಾರಣವಾಯಿತು. ಇದರೊಂದಿಗೆ ಇವರು ರಾಷ್ಟç ಮಟ್ಟದಲ್ಲಿ ನಡೆಯುವ ಸ್ಪರ್ಧೆಗೆ ಕರ್ನಾಟಕದಿಂದ ಆಯ್ಕೆಗೊಂಡರು.