ಸೋಮವಾರಪೇಟೆ : ಕೆಸರು ಗದ್ದೆ ಕ್ರೀಡಾಕೂಟದ ವಿಜೇತರು ಇವರು

01/08/2021

ಸೋಮವಾರಪೇಟೆ ಆ.1 : ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಳ್ಳಿ ಗ್ರಾಮದ ಚನ್ನಕೇಶವ ಯುವಕರ ಬಳಗದ ವತಿಯಿಂದ ಗ್ರಾಮದ ಗದ್ದೆಯಲ್ಲಿ ಶನಿವಾರ ನಡೆದ ಕೆಸರು ಗದ್ದೆ ಕ್ರೀಡಾಕೂಟದ ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಕೂಗೂರು ಗ್ರಾಮದ ತಂಡ ಪ್ರಥಮ ಹಾಗು ಬೀಟಿಕಟ್ಟೆ ಫ್ರೆಂಡ್ಸ್ ಕ್ಲಬ್ ತಂಡ ದ್ವಿತೀಯ ಸ್ಥಾನ ಪಡೆಯಿತು.
ಹಗ್ಗ ಜಗ್ಗಾಟದಲ್ಲಿ ಟೀಮ್ ಶುಂಠಿ ಪ್ರಥಮ, ಗಾಂಧಿ ಫ್ರೆಂಡ್ಸ್ ಚನ್ನಾಪುರ ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಹಿರಿಕರ ಗ್ರಾಮ ತಂಡ ಪ್ರಥಮ, ಹಾರಳ್ಳಿ ಗ್ರಾಮ ತಂಡ ದ್ವಿತೀಯ ಸ್ಥಾನ ಪಡೆಯಿತು. ಹತ್ತು ವರ್ಷದೊಳಗಿನ ಮಕ್ಕಳಿಗೆ ನಡೆದ ಕೆಸರುಗದ್ದೆ ಓಟದಲ್ಲಿ ಕೂಗೂರು ಅಶೋಕ್ ಪ್ರಥಮ, ಹಾರಳ್ಳಿ ಜಿಯಾನ್ ದ್ವಿತೀಯ ಸ್ಥಾನ ಪಡೆದರು.
ಗೌಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಅಜ್ಜಳ್ಳಿ ನವೀನ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಾ ಕುಮಾರ್, ಹಾರಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಉತ್ತಯ್ಯ, ಗೌಡಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಆರ್.ಸುರೇಶ್, ಮಾಜಿ ಅಧ್ಯಕ್ಷ ಎಸ್.ಬಿ. ಭರತ್‌ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ವೆಂಕಟೇಶ್, ಗಣೇಶ್ ಬಹುಮಾನ ದಾನಿಗಳಾದ ಎಚ್.ಡಿ. ಪ್ರವೀಣ್, ಎನ್.ಕೆ. ಅಭಿ, ಪ್ರಣೀತ್ ಕುಶಾಲಪ್ಪ, ಪ್ರತಾಪ್, ದೀಪು, ಎಚ್.ಎಸ್. ಗಿರೀಶ್, ನಾಗರತ್ನ ಕುಮಾರ್, ಬಿ.ಡಿ. ಮಧು, ಎಚ್.ಎಲ್. ರವಿ, ಎಚ್.ಡಿ. ಮಧು, ಸಚಿನ್‌ಧರ್ಮಪ್ಪ, ಹೂವಣ್ಣ, ಅಶೋಕ್ ಇದ್ದರು.