ಸೋಮವಾರಪೇಟೆ : ಒಂದೇ ದಿನ ದಂಪತಿ ನಿಧನ

01/08/2021

ಸೋಮವಾರಪೇಟೆ ಆ.1 : ಸೋಮವಾರಪೇಟೆ ಸಮೀಪದ ನಗರೂರು ಗ್ರಾಮದ ಆಲ್ಬರ್ಟ್ ಡಿಸೋಜ(67) ಹಾಗೂ ಅವರ ಪತ್ನಿ ಬ್ರಿಜಿಟ್(64) ದಂಪತಿಗಳು ಒಂದೇ ದಿನ ನಿಧನರಾದ ಘಟನೆ ಶನಿವಾರ ನಡೆದಿದೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಇವರು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಪತ್ನಿ ಬೆಳಿಗ್ಗೆ 11 ಗಂಟೆಗೆ ನಿಧನರಾದರೆ, ಪತಿ ಸಂಜೆ 4ಕ್ಕೆ ನಿಧನರಾದರು. ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಅಂತ್ಯಕ್ರಿಯೆ ನಗರೂರು ಗ್ರಾಮದಲ್ಲಿ ಭಾನುವಾರ ನಡೆಯಿತು.