ಕಂಡಕರೆಯಲ್ಲಿ ಗಾಂಧಿ ಯುವಕ ಸಂಘ ಅಸ್ತಿತ್ವಕ್ಕೆ : ಅಧ್ಯಕ್ಷರಾಗಿ ಇಸ್ಮಾಯಿಲ್ ಕಂಡಕರೆ ಆಯ್ಕೆ

01/08/2021

ಸಿದ್ದಾಪುರ ಆ.1 : ಚೆಟ್ಟಳ್ಳಿ ಸಮೀಪದ ಕಂಡಕರೆಯಲ್ಲಿ ನೂತನವಾಗಿ ಗಾಂಧಿ ಯುವಕ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಅಧ್ಯಕ್ಷರಾಗಿ ಪತ್ರಕರ್ತ ಇಸ್ಮಾಯಿಲ್ ಕಂಡಕರೆ, ಪ್ರಧಾನ ಕಾರ್ಯದರ್ಶಿಯಾಗಿ ಷರೀಫ್ ಅವಿರೋಧ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಸುಹೈಲ್ ಓ.ಎಮ್,ಕಾರ್ಯದರ್ಶಿ ಹಾಗೂ  ಖಜಾಂಜಿಯಾಗಿ ಉನೈಸ್ ಆಯ್ಕೆಯಾಗಿದ್ದಾರೆ.ಹಾಗೂ ಗಾಂಧಿ ಯುವಕ ಸಂಘದ ಫುಟ್ಬಾಲ್ ತಂಡದ ನಾಯಕನಾಗಿ ಇಬ್ರಾಹಿಂ ಉಪನಾಯಕನಾಗಿ ಅಜಿನಾನ್ ಅವರನ್ನು ಸಂಘದ ಸಭೆಯಲ್ಲಿ ಅವಿರೋಧ ಆಯ್ಕೆ ಮಾಡಲಾಯಿತು.ಸಂಘದ ಸದಸ್ಯರಾಗಿ ನೌಷಾದ್, ದರ್ಶನ್, ಫಾರೂಖ್,ಇರ್ಷಾದ್, ಕಣ್ಣನ್,ಸುಜಿತ್, ಅಫ್ನಾನ್, ಆಬಿದ್, ಡಿಂಪಲ್, ಸಮ್ಮಾಸ್, ಇಬ್ರಾಹಿಂ ಬಿ.ಎಂ ,ರಶೀದ್, ಭವನ್, ಅಬೂತಾಯಿರ್, ಆಲಿ, ಸಿದ್ದೀಖ್, ಸಮೀರ್, ಹಕೀಂ, ಜೀವನ್, ವಿಘ್ನೇಶ್ ಅವರನ್ನು ಆಯ್ಕೆ ಮಾಡಲಾಗಿದೆ. ಸಂಘದ ವತಿಯಿಂದ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.ಅಲ್ಲದೇ ಯುವ ಸಬಲೀಕರಣ ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ,ರಾಜ್ಯ ಫುಟ್ಬಾಲ್ ಸಂಸ್ಥೆಯಲ್ಲಿ ಸಂಘವನ್ನು ಸದ್ಯದಲ್ಲೇ ನೋಂದಾಯಿಸಲಾಗುವುದೆಂದು ಸಂಘದ ಪ್ರಧಾನ ಕಾರ್ಯದರ್ಶಿ ಷರೀಫ್ ಮಾಧ್ಯಮ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.